ನವದೆಹಲಿ : ನರೇಂದ್ರ ಮೋದಿ ನೃತೃತ್ವದ ಕೇಂದ್ರ ಸರ್ಕಾರ ಶನಿವಾರ (ಆಗಸ್ಟ್ 24, 2024) ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯಲ್ಲಿ ಸರ್ಕಾರಿ ನೌಕರರು ನಿವೃತ್ತಿಯ ನಂತರ ನಿಶ್ಚಿತ ಪಿಂಚಣಿ ಪಡೆಯುತ್ತಾರೆ. ಈ ಯೋಜನೆಯು ಏಪ್ರಿಲ್ 01, 2025 ರಿಂದ ಜಾರಿಗೆ ಬರಲಿದೆ.
ಯುಪಿಎಸ್ ವಿಶೇಷತೆಗಳು
– ಉದ್ಯೋಗಿ ಪಾಲು: OPS ನಲ್ಲಿ ಯಾವುದೇ ಉದ್ಯೋಗಿ ಪಾಲು ಇಲ್ಲ
– ಸ್ಥಿರ ಪಿಂಚಣಿ: ನಿವೃತ್ತಿಯ ನಂತರ ನೌಕರರು ನಿಶ್ಚಿತ ಪಿಂಚಣಿ ಪಡೆಯುತ್ತಾರೆ. ಈ ಪಿಂಚಣಿಯು ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ 50% ಆಗಿದೆ. ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ ಉದ್ಯೋಗಿಗಳಿಗೆ ಮಾತ್ರ ಈ ಪ್ರಯೋಜನವಿದೆ.
– ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದ ನಂತರ ನೌಕರ ನಿವೃತ್ತಿಯಾದರೆ, ಅವರು ಖಚಿತವಾದ ಕನಿಷ್ಠ ಪಿಂಚಣಿ ರೂ. 10,000 ಸಿಗಲಿದೆ.
– ಕುಟುಂಬ ಪಿಂಚಣಿ: ಈ ಯೋಜನೆಯಡಿಯಲ್ಲಿ ಕುಟುಂಬ ಪಿಂಚಣಿ ಸೌಲಭ್ಯವೂ ಲಭ್ಯವಿದೆ. ನೌಕರನ ಮರಣದ ನಂತರ ಅವನ ಕುಟುಂಬವು ಒಟ್ಟು ಮೊತ್ತದ 60% ಅನ್ನು ಕುಟುಂಬ ಪಿಂಚಣಿಯಾಗಿ ಪಡೆಯುತ್ತದೆ.
– ಹಣದುಬ್ಬರ ಸೂಚ್ಯಂಕ ಪ್ರಯೋಜನ: ಒಟ್ಟು ಹಣದುಬ್ಬರದ ಪ್ರಕಾರ ಈ ಮೂರು ಪಿಂಚಣಿಗಳಲ್ಲಿ DR (ಡಿಯರ್ನೆಸ್ ರಿಲೀಫ್) ಲಭ್ಯವಿದೆ. ಇದು ಕೈಗಾರಿಕಾ ಕಾರ್ಮಿಕರಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದೆ.
– ಗ್ರಾಚ್ಯುಟಿ: ಉದ್ಯೋಗಿ ಕಳೆದ 6 ತಿಂಗಳ ಸಂಬಳ + ಭತ್ಯೆಗಳನ್ನು ಗ್ರಾಚ್ಯುಟಿ ರೂಪದಲ್ಲಿ ಪಡೆಯುತ್ತಾನೆ. ಇದು ಉದ್ಯೋಗಿಯ ಕೊನೆಯ ಮೂಲ ವೇತನದ 1/10 ಭಾಗವಾಗಿರುತ್ತದೆ.
– ಷೇರು ಮಾರುಕಟ್ಟೆ ಹೂಡಿಕೆಗಳು: ಯುಪಿಎಸ್ನಲ್ಲಿ ಈ ಮೊತ್ತವನ್ನು ಸರ್ಕಾರವು ಭರಿಸುತ್ತದೆ.
– PRC ಯ ಪ್ರಯೋಜನ: PRC ಯುಪಿಎಸ್ಗೆ ಅನ್ವಯಿಸುವುದಿಲ್ಲ
– ಅನುಕಂಪದ ನೇಮಕಾತಿ ಇದೆ
– ಆರೋಗ್ಯ ಕಾರ್ಡ್ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ
`OPS’ ಮತ್ತು `NPS’ ಗಿಂತ `UPS’ ಹೇಗೆ ಭಿನ್ನವಾಗಿದೆ? ಇಲ್ಲಿದೆ ಕಂಪ್ಲಿಡ್ ಡಿಟೈಲ್ಸ್
UPS ನಿಂದ ಯಾರು ಪ್ರಯೋಜನ ಪಡೆಯುತ್ತಾರೆ?
ಎನ್ಪಿಎಸ್ನಲ್ಲಿ ಮುಂದುವರಿಯಬೇಕೆ ಅಥವಾ ಯುಪಿಎಸ್ಗೆ ಸೇರಬೇಕೆ ಎಂದು ನಿರ್ಧರಿಸುವ ಹಕ್ಕು ಕೇಂದ್ರ ಸರ್ಕಾರಿ ನೌಕರರಿಗೆ ಇದೆ. ಈ ಯೋಜನೆಯು 2004 ರಿಂದ NPS ಅಡಿಯಲ್ಲಿ ಎಲ್ಲಾ ನಿವೃತ್ತರಿಗೆ ಅನ್ವಯಿಸುತ್ತದೆ. ಯುಪಿಎಸ್ ಅನ್ನು ಏಪ್ರಿಲ್ 01, 2025 ರಿಂದ ಅಳವಡಿಸಲಾಗುವುದು. ಆದ್ದರಿಂದ, 01 ಜನವರಿ 2004 ರಿಂದ 31 ಮಾರ್ಚ್ 2025 ರವರೆಗೆ NPS ಅಡಿಯಲ್ಲಿ ನಿವೃತ್ತರಾದ ಎಲ್ಲಾ ಉದ್ಯೋಗಿಗಳು UPS ಪ್ರಯೋಜನಗಳನ್ನು ಪಡೆಯಬಹುದು.