ಅಧಿಕೃತ ಮೂಲಗಳ ಪ್ರಕಾರ, 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಿನ ವೆಬ್ಸೈಟ್ಗಳ ಲಿಂಕ್ಗಳನ್ನು ಸರ್ಕಾರ ಶುಕ್ರವಾರ ನಿರ್ಬಂಧಿಸಿದೆ.ಕಳೆದ ವರ್ಷ ಆಗಸ್ಟ್ನಲ್ಲಿ ನೈಜ ಹಣದ ಗೇಮಿಂಗ್ ಅಪ್ಲಿಕೇಶನ್ಗಳ ಮೇಲೆ ಸರ್ಕಾರ ನಿಷೇಧ ಹೇರಿದ್ದ ನಂತರ ಈ ಆದೇಶ ಬಂದಿದೆ.
“ಭಾರತ ಸರ್ಕಾರವು ಇಂದು (ಶುಕ್ರವಾರ) 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಿನ ವೆಬ್ಸೈಟ್ ಲಿಂಕ್ಗಳನ್ನು ನಿರ್ಬಂಧಿಸಿದೆ. ಇಲ್ಲಿಯವರೆಗೆ, 7,800 ಕ್ಕೂ ಹೆಚ್ಚು ಅಕ್ರಮ ಬೆಟ್ಟಿಂಗ್ ಮತ್ತು ಜೂಜಿನ ವೆಬ್ಸೈಟ್ಗಳನ್ನು ತೆಗೆದುಹಾಕಲಾಗಿದೆ, ಆನ್ಲೈನ್ ಗೇಮಿಂಗ್ ಕಾಯ್ದೆ ಅಂಗೀಕಾರದ ನಂತರ ಜಾರಿ ಕ್ರಮಗಳಲ್ಲಿ ಗಮನಾರ್ಹ ಹೆಚ್ಚಳವಾಗಿದೆ” ಎಂದು ಮೂಲಗಳು ತಿಳಿಸಿವೆ.
ಈ ಕ್ರಮವು ಬಳಕೆದಾರರನ್ನು ವಿಶೇಷವಾಗಿ ಯುವಕರನ್ನು ರಕ್ಷಿಸುವ ಮತ್ತು ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಪ್ಲಾಟ್ಫಾರ್ಮ್ಗಳಿಂದ ಉಂಟಾಗುವ ಆರ್ಥಿಕ ಮತ್ತು ಸಾಮಾಜಿಕ ಹಾನಿಯನ್ನು ನಿಗ್ರಹಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿವೆ.








