ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದ ಬಗ್ಗೆ ಇತ್ತೀಚಿನ ವಿವಾದ ಸೇರಿದಂತೆ ಹಲವಾರು ಕಾರಣಗಳನ್ನು ಉಲ್ಲೇಖಿಸಿ ಗುಜರಾತ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅರ್ಜುನ್ ಮೊಧ್ವಾಡಿಯಾ ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ, ಪ್ರತಿಷ್ಠಾಪನಾ ಸಮಾರಂಭಕ್ಕೆ ಸಾಕ್ಷಿಯಾಗಲು ಆಹ್ವಾನವನ್ನ ತಿರಸ್ಕರಿಸಿದ ಪಕ್ಷದ ನಿರ್ಧಾರದ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದ ಮೊಧ್ವಾಡಿಯಾ, ಇದು ಭಾರತದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಭಗವಂತ ರಾಮ ಕೇವಲ ಹಿಂದೂಗಳಿಗೆ ಪೂಜ್ಯ ವ್ಯಕ್ತಿ ಮಾತ್ರವಲ್ಲ, ಅವರು “ಭಾರತದ ನಂಬಿಕೆ” ಎಂದು ಮೊಧ್ವಾಡಿಯಾ ಹೇಳಿದರು. ಕಾಂಗ್ರೆಸ್ ಪಕ್ಷವು ಜನರ ಭಾವನೆಗಳನ್ನ ಅರ್ಥಮಾಡಿಕೊಳ್ಳಲು ವಿಫಲವಾಗಿದೆ ಎಂದು ಅವರು ಆರೋಪಿಸಿದರು ಮತ್ತು ಆಹ್ವಾನವನ್ನ ತಿರಸ್ಕರಿಸುವ ನಿರ್ಧಾರವನ್ನ ಗಂಭೀರ ತಪ್ಪು ಎಂದು ಟೀಕಿಸಿದರು.