ಬೆಂಗಳೂರು: ಕರ್ನಾಟಕ ಡಿಜಿಟಲ್ ಮೀಡಿಯಾ ಜಾಹೀರಾತು ಮಾರ್ಗಸೂಚಿ-2024 ಅನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಮೂಲಕ ಡಿಜಿಟಲ್ ಮೀಡಿಯಾಗಳಿಗೂ ಸರ್ಕಾರಿ ಜಾಹೀರಾತು ನೀಡುವ ಕೆಲಸ ಶೀಘ್ರವೇ ಆಗಲಿದೆ. ಇದಕ್ಕೆ ಕಾರಣವಾಗಿದ್ದೇ, ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯ ವೇದಿಕೆ(KSDMF) ಆಗಿದೆ. ಕೆ ಎಸ್ ಡಿ ಎಂ ಎಫ್ ನ ಅಧ್ಯಕ್ಷರಾದಂತ ಬಿ.ಸಮೀವುಲ್ಲಾ ಬೆಲಗೂರು ಹಾಗೂ ಪ್ರಧಾನ ಕಾರ್ಯದರ್ಶಿ ಶಿವ ಕುಮಾರ್ ಬೆಸಗರಹಳ್ಳಿ ಅವರ ಸತತ ಓಡಾಟ, ಪರಿಶ್ರಮದ ಫಲವಾಗಿ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿದೆ.
ಬಿ.ಸಮೀವುಲ್ಲಾ ಬೆಲಗೂರು ಕರ್ನಾಟಕ ಪತ್ರಿಕಾ ಮಾಧ್ಯಮದಲ್ಲಿ ಚಿರಪರಿಚಿತ ಹೆಸರು. ಈಟಿವಿ, ವಿಜಯ ಕರ್ನಾಟಕ, ಅಭಿಮಾನಿ ಪ್ರಕಾಶನ, ಸುದ್ದಿ ಟಿವಿ, ಸ್ವರಾಜ್ ಟಿವಿ, ಈ ಸಂಜೆ, ಉದಯ ನ್ಯೂಸ್ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದಂತ ಇವರು, ಈಗ ದಿ ಪೋಸ್ಟ್ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ ಡಿಜಿಟಲ್ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದಂತ ಇವರು, ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ವೇದಿಕೆ(KSDMF)ನ ಅಧ್ಯಕ್ಷರಾಗಿರುವಂತ ಸಮೀವುಲ್ಲಾ ಬೆಲಗೂರು, ರಾಜ್ಯ ಸರ್ಕಾರದ ಮಟ್ಟದಲ್ಲಿ ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂಬುದಾಗಿ ಅವಿರತ ಶ್ರಮವಹಿಸುತ್ತಿದ್ದಾರೆ. ಇದರ ಫಲವಾಗಿಯೇ ವಾರ್ತಾ ಇಲಾಖೆಯಿಂದ ಕರ್ನಾಟಕ ಡಿಜಿಟಲ್ ಮೀಡಿಯಾ ಜಾಹೀರಾತು ಮಾರ್ಗಸೂಚಿ 2024 ಪ್ರಕಟವಾಗಿದೆ.
ಇನ್ನೂ ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಕಸ್ತೂರಿ, ನ್ಯೂಸ್ 18 ಕನ್ನಡ, ಟಿವಿ5 ಕನ್ನಡ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವಂತ ಶಿವಕುಮಾರ್ ಬೆಸಗರಹಳ್ಳಿ ಅವರು, ಕರ್ನಾಟಕ ಟಿವಿ ಎನ್ನುವಂತ ಯ್ಯೂಟ್ಯೂಬ್ ಚಾನಲ್ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ. ಡಿಜಿಟಲ್ ಮೀಡಿಯಾಗಳಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಸರ್ಕಾರ ಮಟ್ಟದಲ್ಲಿ ಹಲವು ಬಾರಿ ಚರ್ಚಿಸಿದ ಫಲವಾಗಿ ಇಂದು ಡಿಜಿಟಲ್ ಮೀಡಿಯಾಗಳಿಗೂ ಸರ್ಕಾರಿ ಜಾಹೀರಾತು ನೀಡುವ ಸಂಬಂಧ ಆದೇಶ ಹೊರ ಬಿದ್ದಿದೆ.
ಬಿ ಸಮೀವುಲ್ಲಾ ಬೆಲಗೂರು ಅವರ ಮಾರ್ಗದರ್ಶನ, ಮುಂದಾಳತ್ವ ಹಾಗೂ ಶಿವಕುಮಾರ್ ಬೆಸಗರಹಳ್ಳಿ ಅವರ ಕನಸಿನ ಕೂಸಾಗಿ ಕೆ ಎಸ್ ಡಿ ಎಂ ಎಫ್ ಹುಟ್ಟಿಕೊಂಡಿತ್ತು. ಇದರ ಮುಖ್ಯ ಉದ್ದೇಶವೇ ಸರ್ಕಾರಿ ಸವಲತ್ತು, ಸರ್ಕಾರಿ ಜಾಹೀರಾತುಗಳನ್ನು ಡಿಜಿಟಲ್ ಮೀಡಿಯಾಗಳಿಗೂ ಕಲ್ಪಿಸಿಕೊಡಬೇಕು ಎನ್ನುವುದೇ ಆಗಿದೆ. ಈ ಸಂಘದ ಪ್ರತಿಫಲವಾಗಿ ಕರ್ನಾಟಕ ಡಿಜಿಟಲ್ ಮೀಡಿಯಾ ಜಾಹೀರಾತು ಮಾರ್ಗಸೂಚಿ-2024 ಪ್ರಕಟವಾಗಿದೆ. ಈ ಕಾರ್ಯದ ಹಿಂದಿನ ಅಧ್ಯಕ್ಷರಾದಂತ ಬಿ.ಸಮೀವುಲ್ಲಾ ಬೆಲಗೂರು ಹಾಗೂ ಪ್ರಧಾನ ಕಾರ್ಯದರ್ಶಿ ಶಿವು ಬೆಸಗರಹಳ್ಳಿ ಅವರಿಗೆ ಕನ್ನಡ ನ್ಯೂಸ್ ನೌ ಸುದ್ದಿ ಸಂಸ್ಥೆಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.
ರಾಜ್ಯ ಸರ್ಕಾರದಿಂದ ಶೀಘ್ರವೇ ಡಿಜಿಟಲ್ ಮೀಡಿಯಾಗಳಿಗೆ ಸರ್ಕಾರಿ ಜಾಹೀರಾತು, ಮಾನ್ಯತೆ, ಅಕ್ರಿಡೇಷನ್ ಕಾರ್ಡ್ ನಂತ ಸೌಲಭ್ಯಗಳು ಸಿಗುವ ಕೆಲಸವನ್ನು ಕೆ ಎಸ್ ಡಿ ಎಂ ಎಫ್ ಮಾಡಲಿ ಎಂಬುದಾಗಿ ಕನ್ನಡ ನ್ಯೂಸ್ ನೌ ಸಂಪಾದಕರು ಹಾಗೂ KSDMF ಉಪಾಧ್ಯಕ್ಷರಾದಂತ ವಸಂತ ಬಿ ಈಶ್ವರಗೆರೆ ಆಶಿಸಿದ್ದಾರೆ.
ಹೀಗಿದೆ KSDMF ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ
ಅಧ್ಯಕ್ಷರು- ಬಿ ಸಮೀವುಲ್ಲಾ
ಉಪಾಧ್ಯಕ್ಷರು – ಸುನೀಲ್ ಶಿರಸಂಗಿ, ವಸಂತ ಬಿ ಈಶ್ವರಗೆರೆ
ಪ್ರಧಾನ ಕಾರ್ಯದರ್ಶಿ – ಶಿವಕುಮಾರ್ ಬೆಸಗರಹಳ್ಳಿ
ಜಂಟಿ ಕಾರ್ಯದರ್ಶಿ – ರಜಿನಿ.ಎಂ, ಮಾಲತೇಶ್ ಅರಸ್ ಎಸ್.ವಿ
ಖಜಾಂಚಿ- ಸನತ್ ರೈ
ಸಮಿತಿಯ ಸದಸ್ಯರು – ಗೌರೀಶ್ ಅಕ್ಕಿ, ರಾಘವೇಂದ್ರ ಎಂ.ಎಸ್, ಅಂಕಿತಾ ಕೆ.ಆರ್, ವಿಜಯ್ ಭರಮಸಾಗರ, ಹರೀಶ್ ವಿಎನ್, ಅಮರ್ ಪ್ರಸಾದ್, ದರ್ಶನ್.ಎ.ಟಿ, ಪ್ರವೀಣ್.
ಈಗಾಗಲೇ ಯಾವೆಲ್ಲ ವೆಬ್ ಸೈಟ್, ಯೂಟ್ಯೂಬ್ KSDMF ಸದಸ್ಯತ್ವ ಪಡೆದಿವೆ ಗೊತ್ತಾ?
- ದಿ ಪೋಸ್ಟ್ ಕನ್ನಡ – ಬಿ ಸಮೀವುಲ್ಲ | The Post Kannada
- ಕರ್ನಾಟಕ ಟಿವಿ – ಕೆಎಂ ಶಿವಕುಮಾರ್ | Karnataka TV
- ಮಸ್ತ್ ಮಗಾ – ಅಮರ್ ಪ್ರಸಾದ್ | masthmagaa.com
- ಮೀಡಿಯಾ ಮಾಸ್ಟರ್ – ಎಂಎಸ್ ರಾಘವೇಂದ್ರ | Media Master
- ವಿಜಯ ಟೈಮ್ಸ್ – ವಿಜಯ ಲಕ್ಷ್ಮೀ ಶಿಬರೂರು | Vijaya Times
- ಸಾಕ್ಷ್ಯಾ ಟಿವಿ – ಸನತ್ ರೈ | Sakhsa Tv
- ಕನ್ನಡ ನ್ಯೂಸ್ ನೌ – ಅವಿನಾಶ್ ಆರ್ ಭೀಮಸಂದ್ರ | kannadanewsnow.com
- ಪ್ರತಿಧ್ವನಿ – ಶಿವಕುಮಾರ್ | pratidhvani.com
- ಸುದ್ದಿ ಮನೆ – ಸಾಗರ್ | suddimani.com
- ನ್ಯೂಸ್ ನೆಕ್ಸ್ಟ್ ಲೈವ್ – ಅರುಣ್ ಕುಮಾರ್ | newsnextlive.com
- ಈ ದಿನ.ಕಾಂ – ಸುನೀಲ್ ಶಿರಸಂಗಿ | ensuddi.com
- ಈ ದಿನ – ensuddi.com
- ನಾನು ಗೌರಿ – edina.com
- ನ್ಯೂಸ್ ಪೆಗ್- ಲೂಯಿಸ್ | newspeg.com
- ಸುದ್ದಿ ವಾಣಿ – ಮಾಲ್ಲೇಶ್ | suddivani
- ಕನ್ನಡ ಒನ್ – ರವಿ ಕುಮಾರ್ | Kannadaone
- ಪ್ರತಿಕ್ಷಣ – ಅಕ್ಷಯ್ ಕುಮಾರ್ | prathikshana.com
- ಕರ್ನಾಟಕ ಸ್ಟುಡಿಯೋ – ಬಸವರಾಜ ಕಹಳೆ | Karnataka Studio
- ಎಐಎನ್ – ಮುತ್ತುರಾಜ್ | ain.com
- ಲಯನ್ ಟಿವಿ – ಹರ್ಷವರ್ಧನ | Lion TV
- ಕನ್ನಡ ಫಿಕ್ಚರ್ – ಪ್ರವೀಣ್ ಏಕಾಂತ | Kannada Picchar
- ಸಿನಿಮಾ ಸಾಮ್ರಾಜ್ಯ – ಹರೀಶ್ ಅರಸು | Cinema Samrajya
- ಹೆಗ್ಗದ್ದೆ ಸ್ಟುಡಿಯೋ – ಸಂದೀಪ್ ಹೆಗ್ಗದ್ದೆ | Heggadde Studio
- ಗೌರಿಶ್ ಅಕ್ಕಿ ಸ್ಟುಡಿಯೋ – ಗೌರೀಶ್ ಅಕ್ಕಿ | Gourish Akki Studio
- ಮಿರರ್ ಕನ್ನಡ – ದರ್ಶನ್ | Mirror Kannada
- ರಾಘವೇಂದ್ರ ಚಿತ್ರವಾಣಿ
ನೀವು ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ವೇದಿಕೆ(KSDMF)ನ ಸದಸ್ಯತ್ವವನ್ನು ಪಡೆಯುವ ಇಚ್ಚೆ ಹೊಂದಿದ್ದರೇ, ಸಂಪರ್ಕಿಸಬಹುದಾದ ವಿಳಾಸ – ನಂ.4, 3ನೇ ಕ್ರಾಸ್, ಮಾರುತಿ ಲೇಔಟ್, ಶೋಭಾ ಮೂನ್ ಸ್ಟೋನ್ ಅಪಾರ್ಟ್ ಮೆಂಟ್ ಸಮೀಪ, ದಾಸರಹಳ್ಳಿ, ಬೆಂಗಳೂರು-560024 ಗೆ ಭೇಟಿ ನೀಡಬಹುದಾಗಿದೆ.
BREAKING: ಬೆಂಗಳೂರಿನ ಏರ್ ಪೋರ್ಟ್ ನಲ್ಲೇ ಭೀಕರ ಮರ್ಡರ್: ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಹತ್ಯೆ
BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಮರ್ಡರ್: ಪತ್ನಿಯ ಶೀಲ ಶಂಕಿಸಿ ಕತ್ತು ಕೊಯ್ದು ಭೀಕರ ಹತ್ಯೆ
ಬಿಜೆಪಿ ಕೇಂದ್ರ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿವರ್ತನೆ ಪರ್ವ ಆರಂಭ…!