ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬಗ್ಗೆ ವಿವಾದ ಎದ್ದಿದೆ. ಹೈಕೋರ್ಟ್ ನಲ್ಲಿ ಸಿಎಂ ಸಿದ್ಧರಾಮಯ್ಯ ಸಲ್ಲಿಸಿದ್ದಂತ ರಿಟ್ ಅರ್ಜಿಯ ವಿಚಾರಣೆ ಕೂಡ ನಡೆಯುತ್ತಿದೆ. ಈ ಮಧ್ಯೆ ರಾಜ್ಯಪಾಲರು ಮಹತ್ವದ ಮೂರು ಮಸೂದೆಗಳಿಗೆ ಅಂಕಿತವಾಕಿದ್ದಾರೆ.
ಈ ಕುರಿತಂತೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು ಮಾಹಿತಿ ಹಂಚಿಕೊಂಡಿದ್ದು, ಇಂದು ಮಾನ್ಯ ರಾಜ್ಯಪಾಲರು ಈ ಕೆಳಗಿನ 3 ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ ಮತ್ತು ಕಡತಗಳನ್ನು ಈಗಷ್ಟೇ ಕಳುಹಿಸಿದ್ದಾರೆ ಎಂದಿದ್ದಾರೆ.
ಹೀಗಿವೆ ರಾಜ್ಯಪಾಲರು ಅಂಕಿತ ಹಾಕಿದ ಮೂರು ಮಹತ್ವದ ಮಸೂದೆಗಳು
1. ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯ ತಡೆಗಟ್ಟುವ ಕ್ರಮಗಳು) ಮಸೂದೆ 2023
2. ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮಸೂದೆ 2024
3. ಕರ್ನಾಟಕ ಪುರಸಭೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆ, 2024
BIG NEWS: ‘ಸಿಎಂ ಬದಲಾವಣೆ ಹೇಳಿಕೆ’ಗಳಿಗೆ ಬ್ರೇಕ್ ಹಾಕಿ: ‘ಎಐಸಿಸಿ ಅಧ್ಯಕ್ಷ ಖರ್ಗೆ’ಗೆ ‘ಕಾಂಗ್ರೆಸ್ ಮುಖಂಡ’ರು ಪತ್ರ
BREAKING: ಭಾರತದಲ್ಲಿ ಮೊದಲ ‘ಮಂಕಿಪಾಕ್ಸ್’ ಪ್ರಕರಣ ಪತ್ತೆ: ದೃಢಪಡಿಸಿದ ಕೇಂದ್ರ ಆರೋಗ್ಯ ಸಚಿವಾಲಯ | Monkeypox Case