ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ನವಯುಗ ಟೋಲ್ ನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೂ ಟ್ರಾಫಿಕ್ ಬಿಸಿ ತಟ್ಟಿದೆ. ಅರ್ಧಗಂಟೆಗೂ ಹೆಚ್ಚು ಟೋಲ್ ಬಳಿಯಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಗಿದ್ದರು ಎನ್ನಲಾಗುತ್ತಿದೆ.
ರಾಯಚೂರಿಗೆ ತೆರಳಿದ್ದಂತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಲ್ಲಿಂದ ರಸ್ತೆಯ ಮೂಲಕ ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗದ ನವಯುಗ ಟೋಲ್ ಗೇಟ್ ಗೆ ಬಂದಾಗ ಸಂಚಾರ ದಟ್ಟಣೆಯಲ್ಲಿ ಸಿಲುಕುವಂತೆ ಆಯ್ತು.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದಂತ ಅವರ ಕಾರನ್ನು ಸುಗಮ ಸಂಚಾರದ ಮೂಲಕ ಸಾಗೋದಕ್ಕೆ ಖುದ್ದು ಬೆಂಗಳೂರು ಗ್ರಾಮಾಂತರದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಯವರೇ ಕ್ಲಿಯರ್ ಮಾಡೋದಕ್ಕೆ ಇಳಿದಿದ್ದು ಕಂಡು ಬಂದಿದೆ.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸಂಚಾರ ದಟ್ಟಣೆಯನ್ನು ನೆಲಮಂಗಲ ಟೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕ್ಲಿಯರ್ ಮಾಡಿದ ಬಳಿಕ, ಬೆಂಗಳೂರು ನಗರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರಿನಲ್ಲಿ ಸಂಚಾರ ಮುಂದುವರೆಸುವಂತೆ ಆಯ್ತು.