ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸುರಕ್ಷಿತ ಹೂಡಿಕೆ ಬಯಸುತ್ತಿರುವ ಮಹಿಳೆಯರು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿ ಹಣವನ್ನ ಉಳಿಸಬಹುದು. ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಗೆ ಸೇರಬಹುದು.
ದೇಶದ ಎಲ್ಲಾ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನ ಒದಗಿಸಲು ಕೇಂದ್ರ ಹಣಕಾಸು ಸಚಿವಾಲಯವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನ ನೀಡುತ್ತದೆ. ಈ ಯೋಜನೆಯನ್ನ ಅಂಚೆ ಕಚೇರಿಗಳು ಮತ್ತು ಕೆಲವು ಬ್ಯಾಂಕ್’ಗಳ ಮೂಲಕ ಜಾರಿಗೊಳಿಸಲಾಗುತ್ತಿದೆ. ಇನ್ನು ಈ ಯೋಜನೆಯಲ್ಲಿ ಠೇವಣಿ ಮಾಡಿದ ಮೊತ್ತವು ವಾರ್ಷಿಕ 7.5 ಪ್ರತಿಶತ ಬಡ್ಡಿಯನ್ನು ಗಳಿಸುತ್ತದೆ.
ಈ ಉಳಿತಾಯ ಯೋಜನೆಯಲ್ಲಿ ಕನಿಷ್ಠ 1,000 ಹೂಡಿಕೆ ಮಾಡಬೇಕು. ನೀವು ಗರಿಷ್ಠ 2 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇದಲ್ಲದೆ ಮೆಚ್ಯೂರಿಟಿ ಮೊತ್ತವನ್ನ ಎರಡು ವರ್ಷಗಳ ಅವಧಿಗೆ ಶೇಕಡಾ 7.5 ಬಡ್ಡಿಯಲ್ಲಿ ಪಡೆಯಬಹುದು.
ಭಾರತೀಯ ಪೌರತ್ವ ಹೊಂದಿರುವ ಎಲ್ಲಾ ಮಹಿಳೆಯರು ಈ ಯೋಜನೆಗೆ ಸೇರಬಹುದು. ಹೆಣ್ಣು ಮಕ್ಕಳ ಪಾಲಕರು ತಮ್ಮ ಮಗುವಿನ ಹೆಸರಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಗೆ ಸೇರಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಮಹಿಳೆಯರು ಯಾವುದೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಬಹುದು. ಈ ಯೋಜನೆಯಡಿ ತೆರೆಯಲಾದ ಖಾತೆಯು ಪ್ರತ್ಯೇಕ ಖಾತೆಯಾಗಿರುತ್ತದೆ.
BREAKING : ಷೇರುದಾರರಿಗೆ ಭಾರೀ ನಿರಾಸೆ ; ಸೆನ್ಸೆಕ್ಸ್, ನಿಫ್ಟಿ ಕುಸಿತ, ಒಂದೇ ದಿನಕ್ಕೆ ₹4.2 ಲಕ್ಷ ಕೋಟಿ ನಷ್ಟ
ಸ್ವಾತಂತ್ರ್ಯ ದಿನಾಚರಣೆ ವೇಳೆ ‘ಪ್ಲಾಸ್ಟಿಕ್ ಧ್ವಜ’ ಬಳಸುವಂತಿಲ್ಲ: ಸಾಗರ ನಗರಸಭೆ ಆಯುಕ್ತ ಹೆಚ್.ಕೆ.ನಾಗಪ್ಪ
‘ಕಾಸಿಗಾಗಿ ಪೋಸ್ಟಿಂಗ್’ನಿಂದಲೇ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಕೊಚ್ಚಿ ಹೋದ ಘಟನೆ ನಡೆದಿದೆ: HDK ಗಂಭೀರ ಆರೋಪ