ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವಂತ 2032 ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶಿಸಿದೆ ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಕೆ.ಎಸ್.ಆರ್.ಪಿ. ಸ್ಪೆ.ಆರ್‌ಪಿಸಿ (ಪುರುಷ ಮತ್ತು ಮಹಿಳೆ) 1,500 ಹುದ್ದೆಗಳನ್ನು ಹಾಗೂ (ಸ್ಥಳೀಯ ವೃಂದದ) 336 ಹುದ್ದೆಗಳನ್ನು ಮತ್ತು ಐ.ಆರ್.ಬಿ., ಮುನಿರಾಬಾದ್ ಘಟಕದ 166 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ತಮ್ಮ ಕಛೇರಿಯಿಂದ ಕಳುಹಿಸಲಾದ ನೇರ ಮತ್ತು ಸಮತಳ ವರ್ಗೀಕರಣದ ವಿವರವನ್ನು ನೀಡಲಾಗಿದೆ ಎಂದಿದೆ.
ಪೊಲೀಸ್ ಪ್ರಧಾನ ಕಛೇರಿಯ ಪತ್ರ ಸಂಖ್ಯೆ: 195/ಸಿಬ್ಬಂದಿ-1/2020-21 ದಿನಾಂಕ 13-10-2025ನ್ನು ಉಲ್ಲೇಖಿಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್ ಟೇಬಲ್ ವೃಂದಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಕುರಿತು ಕೆಲವು ಅಂಶಗಳಿಗೆ ಸರ್ಕಾರದಿಂದ ಸ್ವೀಕೃತಗೊಂಡಿರುವ ಸ್ಪಷ್ಟಿಕರಣ ಹಾಗೂ ಆದೇಶಗಳಲ್ಲಿನ ನಿರ್ದೇಶನಗಳನ್ವಯ ಸಂಬಂಧಪಟ್ಟ ಘಟಕಗಳಿಂದ ವರ್ಗೀಕರಣವನ್ನು ಪಡೆದು ಪ್ರಸ್ತಾಪಿತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮಕ್ಕಾಗಿ ಕೋರಲಾಗಿರುತ್ತದೆ ಎಂದಿದೆ.
ಆದ್ದರಿಂದ, ಈಗಾಗಲೇ ತಮ್ಮ ಘಟಕಗಳಿಗೆ ಹಂಚಿಕೆ ಮಾಡಿರುವ ಹುದ್ದೆಗಳಂತೆ ಸಲ್ಲಿಸಲಾಗಿರುವ ನೇರ ಮತ್ತು ಸಮತಳ ವರ್ಗೀಕರಣವನ್ನು ಪೊಲೀಸ್ ಪ್ರಧಾನ ಕಛೇರಿಯ ಪತ್ರ ದಿನಾಂಕ 13-10-2025ರಲ್ಲಿ ನೀಡಿರುವ ನಿರ್ದೇಶನದನ್ವಯ ಮಾರ್ಪಡಿಸಿ ನೇರ ಮತ್ತು ಸಮತಳ ವರ್ಗೀಕರಣವನ್ನು (ಪ್ರಶಂಸನೀಯ ಕ್ರೀಡಾಪಟುಗಳ ವರ್ಗೀಕರಣವನ್ನು ಒಳಗೊಂಡಂತೆ) ಸರ್ಕಾರದ ಪತ್ರ ಸಂಖ್ಯೆ: ಹೆಚ್‌ಡಿ 149 ಪಿಪಿಎ 2025 ದಿನಾಂಕ 10-10-2025ರಲ್ಲಿ ಪ್ರತಿಯೊಂದು ನೇರ ಮೀಸಲಾತಿ ವರ್ಗದಡಿ ಶೇಕಡಾ 3% ರಷ್ಟು ಮೀಸಲಾತಿ ನಿಗದಿಪಡಿಸಿರುವಂತೆ ಮರು ಪ್ರಸ್ತಾವನೆಯನ್ನು ಈ ಕಛೇರಿಯ ಇ-ಮೇಲ್ ಐಡಿ: est6ksrphg@ksp.gov.in ಗೆ ದಿನಾಂಕ 16-10-2025ರೊಳಗಾಗಿ ಮರು ಸಂದೇಶದಲ್ಲಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ.
BREAKING: ಕೋಲಾರದಲ್ಲಿ ‘ಜಾತಿಗಣತಿ ಸಮೀಕ್ಷೆ’ಗೆ ತೆರಳಿದ್ದಾಗ ನಾಪತ್ತೆಯಾಗಿದ್ದ ‘ಶಿಕ್ಷಕಿ’ ಶವವಾಗಿ ಪತ್ತೆ
BREAKING : ಇನ್ಮುಂದೆ ‘PUC’ ಅಲ್ಲಿ 198 & ‘SSLC’ ಅಲ್ಲಿ 206 ಅಂಕ ಪಡೆದರೆ ಪಾಸ್ : ಸಚಿವ ಮಧು ಬಂಗಾರಪ್ಪ