ಬೆಂಗಳೂರು: ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ರಾಜ್ಯದ 84 ತಾಲ್ಲೂಕಿಗೆ ತಾಲ್ಲೂಕು ವೈದ್ಯಾಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಜ್ಞಾಪನಾಪತ್ರ ಹೊರಡಿಸಿದ್ದಾರೆ. ಅದರಲ್ಲಿ 2025ನೇ ಸಾಲಿನ ವಿಶೇಷ ಆಡಳಿತಾತ್ಮಕ ಹುದ್ದೆಗಳಿಗೆ ದಿನಾಂಕ 19-11-2025ರಂದು ಆನ್ ಲೈನ್ ಮೂಲಕ ಸಮಾಲೋಚನೆ ನಡೆಸಲಾಗಿರುತ್ತದೆ. ಅದರಂತೆ ಈ ಕೆಳಕಂಡ ಅಧಿಕಾರಿಗಳನ್ನು ತಾಲ್ಲೂಕು ವೈದ್ಯಾಧಿಕಾರಿಗಳನ್ನಾಗಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟಿಹೆಚ್ಓ ಆಗಿ ಹಾವೇರಿಯ ಎಸ್ಎಂಓ ಆಗಿದ್ದಂತ ನೀಲಕಾಂತಸ್ವಾಮಿ ಎಂ.ವೈ ನ್ಯಾಮತಿ ಅವರನ್ನು ನೇಮಕ ಮಾಡಿದ್ದರೇ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಟಿಹೆಚ್ಓ ಆಗಿ ಬಳ್ಳಾರಿಯ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಆಗಿದ್ದಂತ ಡಾ.ಸಿವಿ ಕಂಬಲಿ ಮಠ ಅವರನ್ನು ನೇಮಕ ಮಾಡಿದ್ದರೇ, ಚಿತ್ರದುರ್ಗ ಟಿಹೆಚ್ಓ ಆಗಿ ದಾವಣಗೆರೆಯ ಜಿಲ್ಲಾ ಟಿಬಿ ಆಫೀಸರ್ ಆಗಿದ್ದಂತ ಡಾ.ಮುರುಳೀಧರ ಪಿ.ಡಿ ನೇಮಿಸಲಾಗಿದೆ.
ಇನ್ನೂ ಶಿವಮೊಗ್ಗ ಟಿಹೆಚ್ಓ ಆಗಿ ಹಾವೇರಿಯ ಡಿಟಿಓ ನೀಲೇಶ್ ಎಂ.ಎನ್, ಶಿರಾ ಟಿಹೆಚ್ಓ ಆಗಿ ಡಾ.ಮಹೇಶ್.ಆರ್, ತುರುವೆಕೆರೆ ಟಿಹೆಚ್ಓ ಆಗಿ ಡಾ.ನವೀನ್ ಕುಮಾರ್.ಪಿಆರ್, ಹೊಸದುರ್ಗ ಟಿಹೆಚ್ಓ ಆಗಿ ರಂಗ ಸ್ವಾಮಿ ನಾಯ್ಕ್.ಎಂ, ತರೀಕೆರೆ ಟಿಹೆಚ್ಓ ಆಗಿ ಡಾ.ಪುರುಷೋತ್ತಮ ಜಿ, ಚಿಕ್ಕಬಳ್ಳಾಪುರ ಟಿಹೆಚ್ಓ ಆಗಿ ಡಾ.ಚಂದನ್ ಕುಮಾರ್.ಎಎಸ್ ನೇಮಿಸಿಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..












