ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಪರೀಕ್ಷೆಗಳಉ ಮತ್ತು ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ನಿಯೋಜಿತ ಸಿಬ್ಬಂದಿಗಳಿಗೆ ಅನ್ಯಕಾರ್ಯ ನಿಮಿತ್ತ ರಜೆ(OOD)ಯನ್ನು ಮಂಜೂರು ಮಾಡುವ ಬಗ್ಗೆ ಮಹತ್ವದ ಆದೇಶವನ್ನು ಸರ್ಕಾರ ಮಾಡಿದೆ.
ಈ ಕುರಿತಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಗೌಪ್ಯಕಾರ್ಯಗಳಿಗೆ ನಿಯೋಜಿತರಾಗಿರುವ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಉನ್ನತ ಶಿಕ್ಷಣ ಸಂಸ್ಥೆಗಳ ವಿಷಯ ತಜ್ಞರುಗಳಿಗೆ ನೀಡಲಾಗುವ ಅನ್ಯ ಕಾರ್ಯ ನಿಮಿತ್ತ (ಓಓಡಿ) ಸೌಲಭ್ಯವನ್ನು ಉಲ್ಲೇಖ(1) ರಲ್ಲಿ ನೀಡಲಾಗಿರುವ ಮಾರ್ಗಸೂಚಿಗಳನ್ವಯ ಪುತಿ ಕೇವಲ ನಾಲ್ಕು
ದಿನಗಳಿಗೆ ಸೆಮಿಸ್ಟರ್‌ಗೆ ಸೀಮಿತಗೊಳಿಸಲಾಗುತ್ತಿರುವುದನ್ನು ಪರಿಷ್ಕರಿಸುವಂತೆ ಉಲ್ಲೇಖ(2) ರಲ್ಲಿ ಕೋರಲಾಗಿರುತ್ತದೆ ಎಂದಿದ್ದಾರೆ.
ಅದರಂತೆ ಪರಿಶೀಲಿಸಲಾಗಿ, ಉಲ್ಲೇಖ(1)ರ ಸುತ್ತೋಲೆಯಲ್ಲಿ ಪ್ರತಿ ಸೆಮಿಸೈರ್‌ಗೆ ನಾಲ್ಕು ದಿನಗಳಿಗೆ ಮಾತ್ರ ಅನ್ಯ ಕಾರ್ಯ ನಿಮಿತ್ತ ಸೌಲಭ್ಯವನ್ನು ಸೀಮಿತಗೊಳಿಸಿ ನೀಡಲಾಗಿರುವ ನಿರ್ದೇಶನವು, ಶೈಕ್ಷಣಿಕ ಸಭೆ-ಸಮಾರಂಭ, ಶೈಕ್ಷಣಿಕ ವಿಚಾರ ಸಂಕಿರಣ-ಸಮ್ಮೇಳನ, ಕಾರ್ಯಾಗಾರಗಳು ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ಮಾತ್ರ ಅನ್ವಯವಾಗುತ್ತಿದ್ದು, ಕರ್ನಾಟಕ ಲೋಕ ಸೇವಾ ಆಯೋಗ/ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳಿಂದ ನಡೆಸುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಗೌಪ್ಯಕಾರ್ಯಗಳಾದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಿಕೆ, ಪುಶ್ನೆ ಮತ್ತು ಕೀ- ಉತ್ತರಗಳ ಪರಿಶೀಲನೆ ಮತ್ತು ಪ್ರಶ್ನೆಗಳ ಕೀ-ಉತ್ತರಗಳಿಗೆ ಆಭಿಪ್ರಾಯ ನೀಡುವುದೇ ಇತ್ಯಾದಿ ಕಾರ್ಯಗಳಿಗೆ ವಿಷಯ ತಜ್ಞರಾಗಿ ನಿಯೋಜಿತರಾಗುವ ಸಿಬ್ಬಂದಿಗಳಿಗೆ ಅನ್ವಯವಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.
ಮುಂದುವರೆದು, ಈ ಪುಕಾರದ ಗೌಪ್ಯ ಕಾರ್ಯಗಳಿಗೆ ವಿಷಯ ತಜ್ಞರಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿಗಳು ಸಂಬಂಧಿಸಿದ ಕಛೇರಿಗೆ ಈ ಕುರಿತು ಹಾಜರಾಗುವ ದಿನಗಳನ್ನು ಅನ್ಯಕಾರ್ಯ ನಿಮಿತ್ತ ಸೇವೆಯೆಂದು ಪರಿಗಣಿಸುವಂತೆ ಸೂಚನೆಯನ್ನು ನೀಡಲಾಗಿದೆ ಎಂದಿದ್ದಾರೆ.
BREAKING: ಅಮೇರಿಕದ ಮಿಸಿಸಿಪ್ಪಿಯ ಹೈಸ್ಕೂಲಲ್ಲಿ ಭೀಕರ ಗುಂಡಿನ ದಾಳಿ: ನಾಲ್ವರು ಸಾವು, 12 ಮಂದಿಗೆ ಗಾಯ
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ