ಶಿವಮೊಗ್ಗ : ಶ್ರೀಗಂಧ ಕೊರತೆಯಿಂದ ಕುಶಲಕರ್ಮಿಗಳ ಬದುಕು ಕಷ್ಟಕರವಾಗಿದೆ. ಕುಶಲಕರ್ಮಿಕಗಳ ಸಂಕಷ್ಟಕ್ಕೆ ಸರ್ಕಾರ ಸದಾ ಸ್ಪಂದಿಸುತ್ತದೆ. ಡಿಪೋದಲ್ಲಿ ಸಂಗ್ರಹಿಸಿಟ್ಟು ಕೊಂಡಿರುವ ಗಂಧವನ್ನು ಕುಶಲಕರ್ಮಿಗಳಿಗೆ ಮೊದಲು ಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶ್ರೀಗಂಧ ಸಂಕೀರ್ಣದಲ್ಲಿ ಕರಕುಶಲ ಅಭಿವೃದ್ದಿ ನಿಗಮದ ವತಿಯಿಂದ ಮಂಜೂರಾದ 65 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದಂತ ಅವರು, ಒಂದು ಕಾಲದಲ್ಲಿ ವಿಧಾನಸೌಧ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ಸಾಗರದ ಕುಶಲಕರ್ಮಿಗಳು ಕೆತ್ತಿದ ಕೆತ್ತನೆ ಇಂದಿಗೂ ಪ್ರದರ್ಶನಗೊಳ್ಳುತ್ತಿದೆ. ನಂತರ ಶ್ರೀಗಂಧದ ಕೊರತೆಯಿಂದ ಸಂಕಷ್ಟ ಎದುರಾಗಿತ್ತು. ಇತರೆ ಮರ ಉಪಯೋಗಿಸಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದು ಇದಕ್ಕೂ ಅಗತ್ಯ ಮಾರುಕಟ್ಟೆಯನ್ನು ನಿಗಮದ ವತಿಯಿಂದ ಮಾಡಿಕೊಡಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ಕುಲಕಸುಬನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದರು.
ಶ್ರೀಗಂಧ ಸಂಕೀರ್ಣದಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ 8 ಲಕ್ಷ ರೂ., ಶಾಲಾ ಕೊಠಡಿ ನಿರ್ಮಾಣಕ್ಕೆ 35 ಲಕ್ಷ ರೂ. ಸೇರಿ ಒಟ್ಟು 65 ಲಕ್ಷ ರೂ. ಮಂಜೂರು ಮಾಡಲಾಗಿದೆ. ವಿಶ್ವ ಯೋಜನೆಯಡಿ ಸಾಗರ ಶ್ರೀಗಂಧ ಸಂಕೀರ್ಣಕ್ಕೆ 109 ಮನೆ ನಿರ್ಮಾಣ ಮಂಜೂರಾಗಿತ್ತು. ಈ ಪೈಕಿ 66 ಮನೆಗಳು ಹಸ್ತಾಂತರವಾಗಿರಲಿಲ್ಲ. ಇದೀಗ 16 ಮನೆಗಳು ಮಂಜೂರಾತಿಗೆ ಸಿದ್ದವಾಗಿದೆ. ರಾಜ್ಯದಲ್ಲಿಯೆ ಸಾಗರದಲ್ಲಿ ವಿಶ್ವ ಯೋಜನೆಯಡಿ ಮೊದಲ ಬಾರಿಗೆ ಮನೆ ಮಂಜೂರಾತಿ ನಡೆಯುತ್ತಿದೆ. ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷೆ ರೂಪಕಲಾ ಅವರು ಕುಶಲಕರ್ಮಿಗಳ ಶ್ರೇಯೋಭಿವೃದ್ದಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಸಂಕೀಣಕ್ಕೆ ಅಗತ್ಯವಿರುವ ಕುಡಿಯುವ ನೀರು, ಬೀದಿದೀಪ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಶಂಕರ ಅಳ್ವಿಕೋಡಿ, ಮಧುಮಾಲತಿ, ರವಿ ಲಿಂಗನಮಕ್ಕಿ, ಬಂಗಾರಪ್ಪ, ಕಲಸೆ ಚಂದ್ರಪ್ಪ, ಗಣೇಶ್ ಸಿಂಗ್, ಅಣ್ಣಪ್ಪ ಇನ್ನಿತರರು ಹಾಜರಿದ್ದರು.
BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ
BREAKING : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೇ ತಯಾರಕ `ಪೆನ್ನ ಓಬಳಯ್ಯ’ ನಿಧನ : ಸಿಎಂ ಸಂತಾಪ








