ಮೈಸೂರು: ಆತ್ಮವಿಶ್ವಾಸ, ಶ್ರಮ ಇದ್ದಲ್ಲಿ ಯಶಸ್ಸು ದೊರೆಯುತ್ತದೆ. ಹಾಗಾಗಿ ಕೆಲಸದಲ್ಲಿ ಬದ್ಧತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಗೆರೆ ಗೋಪಾಲ್ ಅವರು ಹೇಳಿದರು.
ಪರಿಷತ್ ಸಭಾಂಗಣದಲ್ಲಿಂದು ಎಸ್.ಎಸ್. ಕಲಾ ಸಂಗಮ ಟ್ರಸ್ಟ್ ವತಿಯಿಂದ ನಡೆದ ಅಮ್ಮ ಪ್ರಶಸ್ತಿ ಪ್ರದಾನ ಮತ್ತು ಸಂಕ್ರಾಂತಿ ಸಂಭ್ರಮ ಸಮಾರಂಭದಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಗುರಿ ನಮ್ಮ ಬೆನ್ನ ಹಿಂದೆ ಇರುತ್ತದೆ ಅದನ್ನು ತಲುಪುವ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷರಾದ ಡಾ. ನಾಗರಾಜ್ ವಿ. ಬೈರಿ ಅವರು ಮಾತನಾಡಿ, ಇಂದು ಮೊಬೈಲ್ ಯುಗ ಆಗಿದ್ದು, ಅತಿಯಾದ ಬಳಕೆಯಿಂದ ಕ್ರಿಯಾಶೀಲತೆ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಹಿತಿ ಗೊರೂರು ಪಂಕಜ ಸೇರಿದಂತೆ ಹತ್ತು ಮಂದಿ ಸಾಧಕರಿಗೆ ಅಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಲೇಖಕಿ ಕಮಲಾ ಅನಂತರಾವ್, ಸಾಹಿತಿ ಮಹೇಂದ್ರ ಕುಡ್ರಿ, ಕಂದಾಯ ಪರಿವೀಕ್ಷರಾದ ಹೆಚ್.ನಂಜಪ್ಪ, ಅಧಿಕ ರಕ್ತದಾನಿ ತ್ಯಾಗರಾಜ್, ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜಮ್ಮು ಮತ್ತು ಕಾಶ್ಮೀರದ ನದಿಗೆ ಬಿದ್ದ ವಾಹನ: ನಾಲ್ವರು ಸ್ಥಳದಲ್ಲೇ ಸಾವು, ಇಬ್ಬರು ನಾಪತ್ತೆ
BREAKING : ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ `ಯುವನಿಧಿ’ ವಿಶೇಷ ನೋಂದಣಿ ಅಭಿಯಾನ : ಸರ್ಕಾರ ಮಹತ್ವದ ಆದೇಶ.!