ಶಿವಮೊಗ್ಗ: ಮಾರಿಕಾಂಬ ಜಾತ್ರೆ ಪ್ರಯುಕ್ತ ಸಾಗರದ ಗೋಪಾಲಗೌಡ ಕ್ರೀಢಾಂಗಣದಲ್ಲಿ ಹೆಲಿ ಟೂರಿಸಂ ಆಯೋಜಿಸಲಾಗಿತ್ತು. ಇದರಿಂದ ಅನೇಕರು ಮೈದಾನ ಹಾಳಾಗಲಿದೆ ಎಂಬುದಾಗಿ ಆರೋಪಿಸಿದ್ದರು. ಆದರೇ ಹೆಲಿಕ್ಯಾಪ್ಟರ್ ಹಾರಾಟದಿಂದ ಸ್ಟೇಡಿಂನಲ್ಲಿದ್ದಂತ ಧೂಳು ಸಂಪೂರ್ಣವಾಗಿ ಹೋಗಿದೆ. ಈಗ ಪಿಚ್ ಪುಲ್ ಕ್ಲೀನ್ ಆಗಿದೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಂತ ರಾಣಾ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರಿಕಾಂಬ ಜಾತ್ರೆಯ ಪ್ರಯುಕ್ತವಾಗಿ ಹೆಲಿ ಟೂರಿಸಂ ಆಯೋಜಿಸಲಾಗಿತ್ತು. ಗೋಪಾಲಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಕ್ಕೆ ಅನೇಕರು ಆಕ್ಷೇಪಿಸಿದ್ದರು. ಆದರೇ ಅವರು ಆಕ್ಷೇಪಿಸಿದಂತೆ ಯಾವುದೇ ಹಾಳು ಕ್ರೀಡಾಂಗಣದಲ್ಲಿ ಆಗಿಲ್ಲ. ಸುಖಾ ಸುಮ್ಮನೆ ಗೊಂದಲ ಮಾಡುವುದು ಬೇಡ. ಹೆಲಿಕ್ಯಾಪ್ಟರ್ ಹಾರಾಟದಿಂದ ಕ್ರೀಡಾಂಗಣದ ಧೂಳು ಸಂಪೂರ್ಣ ಕ್ಲೀನ್ ಆಗಿದೆ. ಒಂದು ವೇಳೆ ಪಿಚ್ ಹಾಳಾಗಿದ್ದರೇ ಕ್ರೀಢಾಂಗಣ ಕಾಮಗಾರಿಯ ವೇಳೆಯಲ್ಲಿ ಸರಿ ಪಡಿಸಿಕೊಡುವುದಾಗಿ ತಿಳಿಸಿದರು.
ಇಲ್ಲಿ ಕ್ರೀಢಾ ಪಟುಗಳೇ ಇದ್ದಾರೆ. ಆಟ ಆಡೋರಿಗೆ ಹೆಲಿಕ್ಯಾಪ್ಟರ್ ಹಾರಾಟದ ಬಳಿಕ ತುಂಬಾ ಚೆನ್ನಾಗಿ ಆಗಿದೆ. ಸುಖಾ ಸುಮ್ಮನೆ ಗೊಂದಲ ಉಂಟು ಮಾಡೋದು ಬೇಡ. ಹೆಲಿ ಟೂರಿಸಂನಿಂದಾಗಿ ಗೋಪಾಲಗೌಡ ಕ್ರೀಢಾಂಗಣಕ್ಕೆ ಯಾವುದೇ ಹಾನಿಯಾಗಿಲ್ಲ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟ ಪಡಿಸಿದರು.

ಸೀಜನ್-3 ರಾಣಾ ಟ್ರೋಫಿಯನ್ನು ಸ್ನೇಹಿತರಾದಂತ ಸಂದೇಶ್ ಹಾಗೂ ಸ್ನೇಹಿತರು ಆಯೋಜಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು. ಪ್ರತಿವರ್ಷವನ್ನು ಈ ಪಂದ್ಯಾವಳಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿರುವಂತ ರಾಣಾ ಟ್ರೋಫಿಗೆ ಆಲ್ ದಿ ಬೆಸ್ ಎಂಬುದಾಗಿ ಹೇಳಿದರು.
ರಾಣಾ ಟ್ರೋಫಿ ಸೀಸನ್-3 ಇಂದಿನಿಂದ ಆರಂಭಗೊಂಡಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪಂದ್ಯಾವಳಿಗೆ ಚಾಲನೆ ನೀಡಿದ್ದಾರೆ. ಹೆಚ್ಚು ಹೆಚ್ಚು ಕ್ರೀಢಾಭೀಮಾನಿಗಳು ಪಾಲ್ಗೊಳ್ಳಲಿ. ಫೆಬ್ರವರಿ.11ರ ಇಂದಿನಿಂದ ಆರಂಭಗೊಂಡು ಮೂರು ದಿನಗಳ ಕಾಲ ನಡೆಯಲಿದೆ. ಈಗಾಗಲೇ ಹಲವಾರು ತಂಡಗಳು ರಾಣಾ ಟ್ರೋಫಿ ಪಂದ್ಯಾವಳಿಗೆ ನೋಂದಾಯಿಸಿಕೊಂಡಿದ್ದಾರೆ. ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮೊದಲ ಬಹುಮಾನವಾಗಿ ರೂ.1,01,111 ಹಾಗೂ ದ್ವಿತೀಯ ಬಹುಮಾನವಾಗಿ ರೂ.50,555 ನಗದು ಬಹುಮಾನ ಹಾಗೂ ಟ್ರೋಫಿಯನ್ನು ಇಡಲಾಗಿದೆ. iSports ಯೂಟ್ಯೂಬ್ ಚಾಲನ್ ನಲ್ಲಿಯೂ ರಾಣಾ ಟ್ರೋಫಿ ಪಂದ್ಯಾವಳಿಗಳ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ ಎಂಬುದಾಗಿ ತಿಳಿಸಿದರು.
ಈ ವೇಳೆ ಸಾಗರ ನಗರಸಭೆಯ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸದಸ್ಯರಾದಂತ ಮಧುಮಾಲತಿ, ಹೆಲಿ ಟೂರಿಸಂ ಆಯೋಜಿಸಿದ್ದಂತ ಕಿರಣ್ ದೊಡ್ಮನಿ, ತ್ಯಾಗರ್ತಿಯ ಸಹನಾ ರಂಜನ್, ರಾಘು ಗಾಂಧಿನಗರ, ಪ್ರಜ್ವಲ್, ಉದಯ್ ಗಾಂಧಿನಗರ, ಕಲ್ಲಪ್ಪ, ಗೋಪಾಲ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಭಾರತೀಯ ರೈಲ್ವೆ ಏಳು ಹೊಸ ಬುಲೆಟ್ ರೈಲು ಕಾರಿಡಾರ್ ನಿರ್ಮಾಣಕ್ಕೆ ಯೋಜನೆ
SHOCKING: ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ








