ನವದೆಹಲಿ : ಟೆಕ್ ದೈತ್ಯ ಗೂಗಲ್ ಮತ್ತೊಂದು ಸುತ್ತಿನ ವಜಾಕ್ಕೆ ಮುಂದಾಗಿದ್ದು, ಇತ್ತೀಚಿನ ವಜಾಗೊಳಿಸುವಿಕೆಯ ಭಾಗವಾಗಿ, ಒಂದೇ ಬಾರಿಗೆ 1,000 ನೌಕರರನ್ನ ವಜಾಗೊಳಿಸಲಾಗಿದೆ ಎಂದು ಹೇಳಿದೆ. ಏತನ್ಮಧ್ಯೆ, ಕಂಪನಿಯು ಗೂಗಲ್ ಹಾರ್ಡ್‌ವೇರ್, ಸೆಂಟ್ರಲ್ ಎಂಜಿನಿಯರಿಂಗ್ ತಂಡಗಳು ಮತ್ತು ಗೂಗಲ್ ಅಸಿಸ್ಟೆಂಟ್ ಸೇರಿದಂತೆ ಹಲವಾರು ವಿಭಾಗಗಳಲ್ಲಿನ ಸಂಖ್ಯೆಯನ್ನ ಕಡಿತಗೊಳಿಸಿದೆ. ಇನ್ನು ವಜಾಗೊಳಿಸಿರುವ ಕುರಿತು ಮುಂಗಡ ಮಾಹಿತಿ ನೀಡದಿದ್ದಕ್ಕೆ ವಿಷಾದಿಸುತ್ತೇವೆ. ಗೂಗಲ್ ಕಂಪನಿಯು ಈ ಕಠಿಣ ನಿರ್ಧಾರವನ್ನ ತೆಗೆದುಕೊಳ್ಳಬೇಕಾಯಿತು ಎಂದು ಸಂತ್ರಸ್ತ ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ತಿಳಿಸಿದೆ.
ಇದಲ್ಲದೆ, ಅರ್ಹ ಉದ್ಯೋಗಿಗಳಿಗೆ ಅವರು ಪರಿಹಾರ ಪ್ಯಾಕೇಜ್ ಅನ್ವಯಿಸುತ್ತಾರೆ ಎಂದು ಗೂಗಲ್ ತಿಳಿಸಿದೆ. ಇತರೆ ಇಲಾಖೆಗಳಲ್ಲಿ ಆಯ್ಕೆಯಾದ ಅವಕಾಶಗಳಿಗೆ ತಿರಸ್ಕೃತಗೊಂಡಿರುವ ನೌಕರರು ಮರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಕಂಪನಿಗೆ ಮರಳಲು ಅವಕಾಶ ಸಿಗದ ಉದ್ಯೋಗಿಗಳು ಏಪ್ರಿಲ್’ನಲ್ಲಿ ಕಂಪನಿಯನ್ನ ತೊರೆಯಬೇಕು. ಅಲ್ಲದೆ, ಅನೇಕ ಟೆಕ್ ಕಂಪನಿಗಳು 2023ರಲ್ಲಿ ಭಾರಿ ವಜಾ ನಡೆಸಿದ್ದು, ಈ ವರ್ಷವೂ ಅದೇ ಪ್ರವೃತ್ತಿಯನ್ನ ಮುಂದುವರೆಸುತ್ತಿವೆ.
ಕರ್ನಾಟಕ ನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣ: ಸಿಎಂ ಘೋಷಣೆ
ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣದಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ: ಸಿಎಂ
‘ನಾನು ಧರ್ಮದ ಲಾಭ ಪಡೆಯಲು ಬಯಸೋಲ್ಲ, ನನಗೆ ಆಸಕ್ತಿ ಇಲ್ಲ’ : ಅಯೋಧ್ಯೆ ಭೇಟಿ ವಿವಾದಕ್ಕೆ ‘ರಾಹುಲ್’ ಸ್ಪಷ್ಟನೆ