ನವದೆಹಲಿ : ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದ್ದು, ಪಿಎಂ ಯುವ 2.0 ಯೋಜನೆ(PM Yuva 2.0 Yojana)ಗೆ ಚಾಲನೆ ನೀಡಲಾಗುತ್ತಿದೆ. ಇದರ ಅಡಿಯಲ್ಲಿ ಯುವ ಬರಹಗಾರರಿಗೆ ವಿವಿಧ ವಿಷಯಗಳ ಕುರಿತು ಬರೆಯಲು ಅವಕಾಶ ಕಲ್ಪಿಸುವುದರ ಜೊತೆಗೆ ಆಕರ್ಷಕ ಸಂಬಳ ನೀಡಲಿದೆ. ಹೌದು, ಇದರಲ್ಲಿ ಆಯ್ಕೆಯಾದ ಯುವ ಬರಹಗಾರರಿಗೆ ಮಾಸಿಕ 50 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುವುದು. ಅದ್ರಂತೆ, 30 ವರ್ಷದೊಳಗಿನ ಯುವಕರು ಯೋಜನೆಯಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 15 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದೆ.

ಉದಯೋನ್ಮುಖ ಬರಹಗಾರರಿಗೆ ಉತ್ತಮ ಅವಕಾಶ.!
ಪಿಎಂ ಯುವ ಯೋಜನೆಯ ಮೊದಲ ಆವೃತ್ತಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದ್ದು, ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ನಲ್ಲಿ ಯುವ ಮತ್ತು ಉದಯೋನ್ಮುಖ ಬರಹಗಾರರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದರು. ಸಧ್ಯ ಯುವ 2.0 ಗಾಗಿ ಈಗ ಯುವಕರಿಂದ ಅರ್ಜಿಗಳನ್ನ ಕೋರಲಾಗಿದೆ. ದೇಶದಲ್ಲಿ ಓದುವುದು, ಬರವಣಿಗೆ ಮತ್ತು ಪುಸ್ತಕ ಸಂಸ್ಕೃತಿಯನ್ನ ಉತ್ತೇಜಿಸಲು 30 ವರ್ಷ ವಯಸ್ಸಿನ ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ ತರಬೇತಿ ನೀಡಲು ಈ ಪ್ರಕ್ರಿಯೆಯನ್ನ ಪ್ರಾರಂಭಿಸಲಾಗಿದೆ.

ಅಖಿಲ ಭಾರತ ಸ್ಪರ್ಧೆಯ ಮೂಲಕ 75 ಬರಹಗಾರರು ತಿಂಗಳಿಗೆ 50,000 ಪಡೆಯುತ್ತಾರೆ.!
ಒಟ್ಟು 75 ಬರಹಗಾರರನ್ನ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಆಯ್ಕೆ ಮಾಡುತ್ತದೆ. ಮಾರ್ಗದರ್ಶನ ಯೋಜನೆಯಡಿ, ತರಬೇತಿ ನೀಡಲಾಗುತ್ತೆ. ಇನ್ನು ತರಬೇತಿ ಕೊನೆಯಲ್ಲಿ, ಆಯ್ಕೆಯಾದ ಪ್ರತಿ ಯುವ ಬರಹಗಾರರಿಗೆ ಆರು ತಿಂಗಳ ಅವಧಿಗೆ ತಿಂಗಳಿಗೆ 50,000 ರೂ.ಗಳಂತೆ ಒಟ್ಟು 3 ಲಕ್ಷ ರೂ.ಗಳನ್ನ ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.

22 ಭಾಷೆಗಳಿಗೆ ಅರ್ಜಿ ಸಲ್ಲಿಸಬಹುದು.!
ಭಾರತೀಯ ಸಂವಿಧಾನದ 8ನೇ ಶೆಡ್ಯೂಲ್ನಲ್ಲಿ ಪಟ್ಟಿ ಮಾಡಲಾದ 22 ಭಾಷೆಗಳ ಯುವ ಬರಹಗಾರರು PM ಯುವ 2.0 ಯೋಜನೆಯಲ್ಲಿ ಭಾಗವಹಿಸಬಹುದು. ಅದ್ರಂತೆ, ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಬೋಡೋ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ ಸೇರಿವೆ.

ಅರ್ಜಿ ಸಲ್ಲಿಸುವ ವಿಧಾನ.!
ಮಹತ್ವಾಕಾಂಕ್ಷಿ ಯುವ ಬರಹಗಾರರಿಗಾಗಿ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿಗಳನ್ನ ಸ್ವೀಕರಿಸಲು ಕೊನೆಯ ದಿನಾಂಕ 15 ಜನವರಿ 2023 ಎಂದು ನಿಗದಿಪಡಿಸಲಾಗಿದೆ. ಯುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://innovateindia.mygov.in/yuva/ ಗೆ ಭೇಟಿ ನೀಡುವ ಮೂಲಕ ಮತ್ತು ಕೆಳಗಿನ ಎಡಭಾಗದಲ್ಲಿರುವ ‘ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ’ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಪಿಎಂ ಯುವ 2.0 ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನ ವೆಬ್ಸೈಟ್ನಲ್ಲಿಯೇ ನೀಡಲಾಗಿದೆ.

BIGG NEWS: ಸಿದ್ದೇಶ್ವರ ಶ್ರೀಗಳ ದರ್ಶನ ಮಾಡುವ ಪುಣ್ಯ ನಾನು ಪಡೆದುಕೊಂಡಿಲ್ಲ; ಪಕ್ಷದ ಕಾರ್ಯಕ್ರಮ ರದ್ದು; ಜಮೀರ್ ಅಹ್ಮದ್

BIGG NEWS : ಶಾಲಾ ಪಠ್ಯದಲ್ಲಿ ‘ಸಿದ್ದೇಶ್ವರ ಶ್ರೀ’ ಜೀವನ ಚರಿತ್ರೆ ಅಳವಡಿಕೆ : ಸಿಎಂ ಬೊಮ್ಮಾಯಿ ಘೋಷಣೆ

BIGG NEWS: ತಿರುಪತಿ ತಿರುಮಲ ಕೋಟ್ಯಾಧಿಪತಿ : ವೈಕುಂಠ ಏಕಾದಶಿಗೆ ತಿಮ್ಮಪ್ಪನ ಹುಂಡಿಯಲ್ಲಿ 7 ಕೋಟಿ ಹಣ ಸಂಗ್ರಹ | Tirupati temple

Share.
Exit mobile version