ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜನವರಿ 2 ರಂದು ನಡೆದ ವೈಕುಂಠ ಏಕಾದಶಿಗೆ ತಿರುಪತಿಗೆ ಭಕ್ತ ಸಾಗರವೇ ಹರಿದು ಬಂದಿದ್ದು, ತಿರುಮಲ ತಿರುಪತಿ ದೇವಸ್ಥಾನ (TTD) ಇತಿಹಾಸದಲ್ಲಿ ಮೊದಲ ಬಾರಿಗೆ ತಿಮ್ಮಪ್ಪನ ಹುಂಡಿ ಸಂಗ್ರಹವು 7.68 ಕೋಟಿ ರೂ. ದಾಖಲೆಯ ಆದಾಯವನ್ನು ದಾಖಲಿಸಿದೆ.

ಎಬಿಪಿ ದೇಶಂ ವರದಿಯ ಪ್ರಕಾರ, ತಿರುಮಲದ ಬೆಟ್ಟದ ದೇವಾಲಯದಲ್ಲಿ ಒಂದೇ ದಿನದಲ್ಲಿ ಮಾಡಿದ ಅತಿ ಹೆಚ್ಚು ಹುಂಡಿ ಆದಾಯ ಇದಾಗಿದೆ. ಭಾನುವಾರ 69,414 ಭಕ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ಟೋಬರ್ 23, ರಂದು ತಿರುಮಲ ಹುಂಡಿಯಲ್ಲಿ ಹಿಂದಿನ ಅತಿ ಹೆಚ್ಚು ಸಂಗ್ರಹ   6.31 ಕೋಟಿ ರೂ. ಆಗಿತ್ತು.

ಡೆಕ್ಕನ್ ಕ್ರಾನಿಕಲ್ ವರದಿಯ ಪ್ರಕಾರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳ ಚುನಾಯಿತ ಅಧಿಕಾರಿಗಳು, ನ್ಯಾಯಾಧೀಶರು, ಅಧಿಕಾರಿಗಳು, ಸೆಲೆಬ್ರಿಟಿಗಳು ಮತ್ತು ಇತರ ವಿಐಪಿಗಳು ಸೋಮವಾರ ವೈಕುಂಠ ಏಕಾದಶಿಯೆಂದು ತಿರುಮಲಕ್ಕೆ ಭೇಟಿ ನೀಡಿದ್ದರು.

BIGG NEWS : ಶಾಲಾ ಪಠ್ಯದಲ್ಲಿ ‘ಸಿದ್ದೇಶ್ವರ ಶ್ರೀ’ ಜೀವನ ಚರಿತ್ರೆ ಅಳವಡಿಕೆ : ಸಿಎಂ ಬೊಮ್ಮಾಯಿ ಘೋಷಣೆ

‘ಭಾರತ, ಯುದ್ಧವನ್ನ ಬಯಸೋಲ್ಲ, ಆದ್ರೆ ಕೆಣಕಿದ್ರೆ..’ ಚೀನಾ ಗಡಿ ಬಳಿ ಸಚಿವ ‘ರಾಜನಾಥ್ ಸಿಂಗ್’ ಗುಡುಗು

BIGG NEWS: ಜ.16ರಿಂದ ಎರಡು ದಿನ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ | BJP Meeting

Share.
Exit mobile version