ಕೆಎನ್ಎನ್ಡಿಜಿಟಲ್ ಡೆಸ್ಕ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ (ಜನವರಿ 3) ಅರುಣಾಚಲ ಪ್ರದೇಶ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 9 ರಂದು ತವಾಂಗ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಚಕಮಕಿಯ ನಂತ್ರ ರಕ್ಷಣಾ ಸಚಿವರು ಅರುಣಾಚಲ ಪ್ರದೇಶಕ್ಕೆ ತಮ್ಮ ಮೊದಲ ಭೇಟಿಯಲ್ಲಿದ್ದಾರೆ. ಈ ವೇಳೆ ರಕ್ಷಣಾ ಸಚಿವರು ಸಿಯಾಂಗ್ನಲ್ಲಿ ಮಾತನಾಡಿ, ದೇಶದ ಗಡಿಯಲ್ಲಿ ಎದುರಾಳಿಗಳ ಸವಾಲುಗಳನ್ನ ವಿಫಲಗೊಳಿಸುವ ಸಂಪೂರ್ಣ ಸಾಮರ್ಥ್ಯ ಭಾರತಕ್ಕಿದೆ ಎಂದರು.

ಭಾರತ ಎಂದಿಗೂ ಯುದ್ಧವನ್ನ ಬಯಸುವುದಿಲ್ಲ ಮತ್ತು ಯಾವಾಗಲೂ ತನ್ನ ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬಂಧವನ್ನ ಕಾಪಾಡಿಕೊಳ್ಳಲು ಬಯಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಗಡಿ ರಸ್ತೆಗಳ ಸಂಸ್ಥೆ (BRO) ನಿರ್ಮಿಸಿದ ಸೇತುವೆಯನ್ನ ಉದ್ಘಾಟಿಸಿದ ನಂತರ ರಕ್ಷಣಾ ಸಚಿವರು, ಗಡಿಯಲ್ಲಿ ಯಾವುದೇ ಸವಾಲನ್ನ ಎದುರಿಸುವ ಸಾಮರ್ಥ್ಯವನ್ನ ಭಾರತೀಯ ಸೇನೆ ಹೊಂದಿದೆ ಮತ್ತು ಯಾವುದೇ ಪರಿಸ್ಥಿತಿಯನ್ನ ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದರು.

“ಯಾವುದೇ ಸವಾಲನ್ನ ಎದುರಿಸಲು ನಾವು ಸಿದ್ಧ”
ಭಾರತವು ತನ್ನ ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬಂಧವನ್ನ ಕಾಪಾಡಿಕೊಳ್ಳಲು ಬಯಸುವ ದೇಶವಾಗಿದೆ. ಇದು ಭಗವಾನ್ ರಾಮ ಮತ್ತು ಭಗವಾನ್ ಬುದ್ಧನ ಬೋಧನೆಗಳಿಂದ ನಮಗೆ ಆನುವಂಶಿಕವಾಗಿ ಬಂದಿದೆ. ಆದರೆ, ಪ್ರಚೋದನೆಯಾದಲ್ಲಿ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ದೇಶಕ್ಕಿದೆ. “ಇದು ಯುದ್ಧದ ಯುಗವಲ್ಲ” ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂಕಲ್ಪವನ್ನ ಮರು ಸ್ಪಷ್ಟಪಡಿಸಿದ್ದಾರೆ ಮತ್ತು ಈ ನಿರ್ಣಯದ ಬಗ್ಗೆ ವಿಶ್ವದ ಗಮನ ಸೆಳೆದಿದ್ದಾರೆ ಅಂದರೆ ನಾವು ಯುದ್ಧವನ್ನು ಬಸಸೋದಿಲ್ಲ. ಆದ್ರೆ, ನಮ್ಮ ಮೇಲೆ ಯುದ್ಧ ಹೇರಿದರೆ ಅವ್ರನ್ನ ಬಿಡುವುದಿಲ್ಲ . ಹೀಗಾಗಿ ನಾವು ಪ್ರತಿ ಸವಾಲನ್ನ ಎದುರಿಸಲು ಸಿದ್ಧರಿದ್ದೇವೆ ಎಂದರು.

 

BIGG NEWS : ‘ಸಿದ್ದೇಶ್ವರ ಶ್ರೀ’ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ದತೆ ಆರಂಭ

BIGG NEWS : ನ್ಯೂ ಇಯರ್‌ಗೆ ದೆಹಲಿಯಲ್ಲಿ 218 ಕೋಟಿ ಮೌಲ್ಯದ ಮದ್ಯ ಮಾರಾಟ : ಅಬಕಾರಿ ಇಲಾಖೆ ಮಾಹಿತಿ ಬಹಿರಂಗ

BIGG NEWS: ಸಿದ್ದೇಶ್ವರ ಶ್ರೀಗಳ ದರ್ಶನ ಮಾಡುವ ಪುಣ್ಯ ನಾನು ಪಡೆದುಕೊಂಡಿಲ್ಲ; ಪಕ್ಷದ ಕಾರ್ಯಕ್ರಮ ರದ್ದು; ಜಮೀರ್ ಅಹ್ಮದ್

Share.
Exit mobile version