ನವದೆಹಲಿ : ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಇನ್ನೂ ಆರು ದೇಶಗಳ ಮಾನ್ಯ ವೀಸಾಗಳು, ನಿವಾಸ ಪರವಾನಗಿಗಳು ಅಥವಾ ಗ್ರೀನ್ ಕಾರ್ಡ್ ಹೊಂದಿರುವ ಪ್ರಯಾಣಿಕರನ್ನ ಅರ್ಹತಾ ಪಟ್ಟಿಯಲ್ಲಿ ಸೇರಿಸುವ ಮೂಲಕ ಭಾರತೀಯ ಪ್ರಜೆಗಳಿಗೆ ವೀಸಾ-ಆನ್-ಅರೈವಲ್ ಕಾರ್ಯಕ್ರಮವನ್ನ ವಿಸ್ತರಿಸಿದೆ. ಈ ಕ್ರಮವು ಹೆಚ್ಚಿನ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಯುಎಇ ಪ್ರವೇಶ ಸ್ಥಳಗಳಲ್ಲಿ ವೀಸಾ-ಆನ್-ಅರೈವಲ್ ಸೌಲಭ್ಯಗಳನ್ನ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಅರಬ್ ದೇಶದ ಇತ್ತೀಚಿನ ಆದೇಶದ ಪ್ರಕಾರ, ಸಿಂಗಾಪುರ್, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾದ ಮಾನ್ಯ ವೀಸಾಗಳು, ನಿವಾಸ ಪರವಾನಗಿಗಳು ಅಥವಾ ಗ್ರೀನ್ ಕಾರ್ಡ್ಗಳನ್ನು ಹೊಂದಿರುವ ಭಾರತೀಯರಿಗೆ ಯುಎಇಯಲ್ಲಿ ವೀಸಾ-ಆನ್-ಅರೈವಲ್ ಸೌಲಭ್ಯಕ್ಕೆ ಪ್ರವೇಶವನ್ನು ಅನುಮತಿಸಲಾಗುವುದು. ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು ಮತ್ತು ಯುನೈಟೆಡ್ ಕಿಂಗ್ಡಮ್ನಿಂದ ಮಾನ್ಯ ದಾಖಲೆಗಳನ್ನ ಹೊಂದಿರುವ ಭಾರತೀಯ ಪ್ರಜೆಗಳಿಗೆ ಅರಾದ್ ರಾಷ್ಟ್ರವು ಈಗಾಗಲೇ ಈ ನೀತಿಯನ್ನು ಹೊಂದಿದೆ.
ಅರ್ಹತಾ ಮಾನದಂಡಗಳು.!
ಈ ಕಾರ್ಯಕ್ರಮಕ್ಕೆ ಅರ್ಹರಾಗಲು, ಭಾರತೀಯ ಪ್ರಜೆಗಳು ಯುಎಇ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಬೇಕು, ಇದರಲ್ಲಿ ಆಗಮಿಸಿದ ದಿನಾಂಕದಿಂದ ಕನಿಷ್ಠ ಆರು ತಿಂಗಳ ಮಾನ್ಯತೆಯೊಂದಿಗೆ ಮಾನ್ಯ ಸಾಮಾನ್ಯ ಪಾಸ್ಪೋರ್ಟ್ ಹೊಂದಿರುವುದು ಸೇರಿದೆ. ಪ್ರಯಾಣಿಕರು ಪಟ್ಟಿಯಲ್ಲಿರುವ ಯಾವುದೇ ಅರ್ಹ ದೇಶಗಳಿಂದ ಮಾನ್ಯ ವೀಸಾ, ನಿವಾಸ ಪರವಾನಗಿ ಅಥವಾ ಗ್ರೀನ್ ಕಾರ್ಡ್ ಹೊಂದಿರಬೇಕು.
ಅವರು ಈ ಅವಶ್ಯಕತೆಗಳನ್ನ ಪೂರೈಸಿದರೆ, ವ್ಯಕ್ತಿಗಳು ಯುಎಇ ವಲಸೆ ಚೆಕ್ಪಾಯಿಂಟ್ಗಳಿಗೆ ಆಗಮಿಸಿದ ನಂತರ ವೀಸಾ ಶುಲ್ಕವನ್ನ ಪಾವತಿಸಬೇಕಾಗುತ್ತದೆ.
ಮೋದಿ ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದ ತಮಿಳು ನಿಯತಕಾಲಿಕೆ ‘ವಿಕಟನ್’ ವೆಬ್ ಸೈಟ್ ಬ್ಲಾಕ್
ಕೆಲಸದ ಸ್ಥಳದಲ್ಲಿ ಹಿರಿಯರು ಬುದ್ಧಿವಾದ ಹೇಳುವುದು ಕ್ರಿಮಿನಲ್ ಅಪರಾಧವಲ್ಲ : ಸುಪ್ರೀಂ ಕೋರ್ಟ್