ಬೆಂಗಳೂರು : 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರುಗಳನ್ನು ನೇಮಕ ಮಾಡಿಕೊಳ್ಳುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2024-25 ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಯಂ ಶಿಕ್ಷಕರ ನೇಮಕವಾಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಯಾವುದು ಮೊದಲೂ ಅಲ್ಲಿಯವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಒಟ್ಟು 35000 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಆದೇಶ ಸಂಖ್ಯೆ ಇಪಿ 166 ಎಸ್‌ಇ.ಎಸ್.2023 ದಿನಾಂಕ 01.06.2023 ಆದೇಶದಲ್ಲಿ ಅನುಮತಿ ನೀಡಲಾಗಿದೆ.
ಅದರಂತೆ, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5 ನೇ ತರಗತಿ) ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ವೃಂದದ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರನ್ನು ಷರತ್ತಿಗೊಳಪಟ್ಟು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅತಿಥಿ ಶಿಕ್ಷಕರ ಹುದ್ದೆಗಳನ್ನು ಹಂಚಿಕೆ ಮಾಡಿ ಆದೇಶಿಸಲಾಗಿತ್ತು.
ಉಲ್ಲೇಖ 02 ರ ಜ್ಞಾಪನದಲ್ಲಿ ವರ್ಗಾವಣೆ ನಂತರ ಕೆಲವೊಂದು ತಾಲ್ಲೂಕುಗಳಲ್ಲಿ ಹುದ್ದೆಗಳು ಭರ್ತಿಯಾಗಿದ್ದು, ಹಾಗೂ ಕೆಲವೊಂದು ತಾಲ್ಲೂಕುಗಳಲ್ಲಿ ಹುದ್ದೆಗಳು ತೆರವಾಗಿದ್ದು ಜಿಲ್ಲೆಗೆ ಮಂಜೂರಾದ/ಹಂಚಿಕೆಯಾದ ಸಂಖ್ಯೆ ಮಿತಿಯೊಳಗೆ ಜಿಲ್ಲೆಯೊಳಗೆ ಮರು ಹೊಂದಾಣಿಕೆ ಮಾಡಿಕೊಳ್ಳಲು ಜಿಲ್ಲಾ ಉಪನಿರ್ದೇಶಕರಿಗೆ ಅನುಮತಿ ನೀಡಲಾಗಿತ್ತು.
ಉಲ್ಲೇಖ 02 ರ ಸೂಚನೆಗಳನುಸಾರ ಮರು ಹೊಂದಾಣಿಕೆ ನಂತರ ಕೆಲವೊಂದು ಜಿಲ್ಲೆಗಳಲ್ಲಿ ಅಗತ್ಯತೆ/ಅವಶ್ಯಕತೆ ಇಲ್ಲದ ಅತಿಥಿ ಶಿಕ್ಷಕರ ಹುದ್ದೆಗಳನ್ನು ಈ ಕಛೇರಿಗೆ ಅಧ್ಯಾರ್ಪಿಸಿರುತ್ತಾರೆ. ಹಾಗೂ ಕೆಲವೊಂದು ಜಿಲ್ಲೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ನಂತರ ಹುದ್ದೆಗಳು ತೆರವಾಗಿದ್ದು ಹೆಚ್ಚುವರಿ ಅತಿಥಿ ಹುದ್ದೆಗಳನ್ನು ಹಂಚಿಕೆ ಮಾಡಲು ಉಲ್ಲೇಖ 03 ರಂತೆ ಸ್ವೀಕೃತವಾಗಿರುವ ಕೋರಿಕೆ ಪರಿಗಣಿಸಿ ಅಧ್ಯಾರ್ಪಿಸಿರುವ ಹುದ್ದೆಗಳು ಹಾಗೂ ಈ ಕಛೇರಿಯಲ್ಲಿ ಉಳಿಕೆ ಇದ್ದ ಹುದ್ದೆಗಳ ಸೇರಿದಂತೆ 2 ನೇ ಹಂತದಲ್ಲಿ ಉಲ್ಲೇಖ 01 ರ ಜ್ಞಾಪದಲ್ಲಿನ ಷರತ್ತುಗಳಿಗೆ ಒಳಪಡಿಸಿ ಮರು ಹಂಚಿಕೆ ಮಾಡಿ ಹಂಚಿಕೆ ಮಾಡಿ ಆದೇಶಿಸಿದೆ.
ಈ ಕಛೇರಿಗೆ ಅಧ್ಯಾರ್ಪಿಸಿರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಯಾಗದಂತೆ ತೀವು ಎಚ್ಚರಿಕೆ ವಹಿಸಲು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು ಹಾಗೂ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.
ಸರ್ಕಾರದ ಆದೇಶ ಸಂಖ್ಯೆ ಆಇ 369 ವೆಚ್ಚ 6/2024ಇ ದಿನಾಂಕ 23.09.2024 ರ ಪ್ರಕಾರ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಪಾವತಿಸಲು ಬಿಡುಗಡೆ ಮಾಡಿರುವ ಅನುದಾನವನ್ನು ನಿಯಮಾನುಸಾರ ಬಳಕೆ ಮಾಡುವುದು ಕೊರತೆಯಾಗುವ ಅನುದಾನ ಹಾಗೂ ಪ್ರಸ್ತುತ 2 ನೇ ಹಂತದಲ್ಲಿ ಹಂಚಿಕೆ ಮಾಡಿರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಬೇಕಾಗುವ ಅನುದಾನದ ವಿವರಗಳನ್ನು ನಿಖರವಾಗಿ ಲೆಕ್ಕಚಾರ ಮಾಡಿದ ವಿವರಗಳನ್ನು ದಿನಾಂಕ 20.10.2024 ರ primarydpi@gmail ಮೂಲಕ ಈ ಕಛೇರಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.