ನವದೆಹಲಿ : ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನ ನೀಡುತ್ತಿದೆ. ಶೇಕಡಾ 40 ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ (9 ಮತ್ತು 10 ನೇ ತರಗತಿಗಳು) ಈ ತಿಂಗಳ 30 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ (ಇಂಟರ್ನ್ ನಿಂದ ಪಿಜಿ) ಮತ್ತು ಉನ್ನತ ದರ್ಜೆಯ ಶಿಕ್ಷಣ ವಿದ್ಯಾರ್ಥಿವೇತನ (ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಿಜಿ ಕೋರ್ಸ್‌ಗಳು) ಗಾಗಿ ಅರ್ಜಿಗಳನ್ನ ಅಕ್ಟೋಬರ್ 31ರವರೆಗೆ ಸಲ್ಲಿಸಬಹುದು.
ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳಿಗೆ, ಪೋಷಕರ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆಯಿರಬೇಕು ಮತ್ತು ಉನ್ನತ ದರ್ಜೆಯ ವಿದ್ಯಾರ್ಥಿವೇತನಗಳಿಗೆ, ಪೋಷಕರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆಯಿರಬೇಕು. ದೇಶಾದ್ಯಂತ 25 ಸಾವಿರ ಜನರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ, 17 ಸಾವಿರ ಜನರಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು 300 ಜನರಿಗೆ ಉನ್ನತ ದರ್ಜೆಯ ಶಿಕ್ಷಣ ವಿದ್ಯಾರ್ಥಿವೇತನವನ್ನ ನೀಡಲಾಗುವುದು. ಸಂಪೂರ್ಣ ವಿವರಗಳಿಗಾಗಿ, https://scholarships.gov.in ಗೆ ಭೇಟಿ ನೀಡಿ.
ಅ.1ರಿಂದ ಪಿಂಚಣಿಯಿಂದ ರೈಲು ಟಿಕೆಟ್’ಗಳವರೆಗೆ ಹಲವು ನಿಯಮ ಬದಲಾವಣೆ, ಹೊಸ ರೂಲ್ಸ್ ಇಂತಿವೆ!
BREAKING: ಬೆಂಗಳೂರಲ್ಲಿ ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಬಿಟ್ಟ AE ಸಸ್ಪೆಂಡ್: ಸಿಎಂ ಸಿದ್ದರಾಮಯ್ಯ ಆದೇಶ
ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ಬೆಂಬಲಿಸಿದ ಪಾಕ್ ಪ್ರಧಾನಿಗೆ ಭಾರತ ತರಾಟೆ ; ನಾಟಕ ನಿಲ್ಲಿಸುವಂತೆ ತಾಕೀತು