ನವದೆಹಲಿ : ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳೊಂದಿಗಿನ ಸಂಬಂಧಗಳನ್ನ ಬಲಪಡಿಸುವ ನಿಟ್ಟಿನಲ್ಲಿ ಭಾರತವು ಫಿಲಿಫೈನ್ಸ್’ನೊಂದಿಗಿನ ಸಂಬಂಧಗಳಿಗೆ ಕಾರ್ಯತಂತ್ರದ ಪಾಲುದಾರಿಕೆಯ ಸ್ಥಾನಮಾನವನ್ನ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಫಿಲಿಫೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್ ಮಾರ್ಕೋಸ್ ಜೂನಿಯರ್ ನಡುವಿನ ಉನ್ನತ ಮಟ್ಟದ ಮಾತುಕತೆಯಲ್ಲಿ ಈ ಕುರಿತು ಒಪ್ಪಂದಕ್ಕೆ ಬರಲಾಯಿತು. ಫಿಲಿಫೈನ್ಸ್‌ಆಸಿಯಾನ್’ನ ಸದಸ್ಯ ರಾಷ್ಟ್ರವಾಗಿದ್ದು, ಭಾರತ ಈಗಾಗಲೇ ಅದರೊಂದಿಗೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಸ್ಥಾನಮಾನವನ್ನ ನೀಡಿದೆ.
ಆದರೆ ಭಾರತ ಈಗ ಈ ಸಂಘಟನೆಯ ಸದಸ್ಯ ರಾಷ್ಟ್ರಗಳೊಂದಿಗೆ ಬಹು ಆಯಾಮದ ಸಂಬಂಧಗಳನ್ನ ಮಾಡಿಕೊಳ್ಳುತ್ತಿದೆ. ಮೋದಿ ಮತ್ತು ಮಾರ್ಕೋಸ್ ಜೂನಿಯರ್ ನಡುವಿನ ಸಭೆಯಲ್ಲಿ ರಕ್ಷಣೆ, ಭದ್ರತೆ ಮತ್ತು ಮಿಲಿಟರಿ ವಲಯದಲ್ಲಿ ಸಹಕಾರದ ವಿಷಯವು ಬಹಳ ಮುಖ್ಯವಾಗಿತ್ತು.
ಬ್ರಹ್ಮೋಸ್ ಕ್ಷಿಪಣಿ ಖರೀದಿಸಿದ ಮೊದಲ ದೇಶ ಫಿಲಿಫೈನ್ಸ್.!
ಭಾರತ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಿದ ಮೊದಲ ದೇಶ ಫಿಲಿಪೈನ್ಸ್. ಮಂಗಳವಾರ ನಡೆದ ಸಭೆಯಲ್ಲಿ, ಫಿಲಿಪೈನ್ಸ್ ಭಾರತದ ಅನೇಕ ರಕ್ಷಣಾ ವೇದಿಕೆಗಳಲ್ಲಿ (ಆಯುಧಗಳು ಮತ್ತು ಉಪಕರಣಗಳು) ಆಸಕ್ತಿ ತೋರಿಸಿದೆ ಎಂದು ಭಾರತದಿಂದ ತಿಳಿಸಲಾಗಿದೆ.
BREAKING : ಮತ್ತೆ ಬಲ ಬಿಚ್ಚಿದ ಪಾಪಿ ಪಾಕ್ ; ಕದನ ವಿರಾಮ ಉಲ್ಲಂಘಿಸಿ ‘LoC’ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ
ಇ-ಸ್ವತ್ತು ಸವಾಲು, ತಾಂತ್ರಿಕ ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
ಪ್ರಾಣಿ ಹಿಂಸೆ ತಡೆಗೆ ಮಹತ್ವದ ಕ್ರಮ ; ಮೊದಲ ಅಪರಾಧಕ್ಕೆ ಕನಿಷ್ಠ ₹10 ದಂಡ : ಕೇಂದ್ರ ಸರ್ಕಾರ