ಬೆಂಗಳೂರು : ರಾಜ್ಯದ ಕುಶಲಕರ್ಮಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಸಾಲದ ಜೊತೆಗೆ ಸಹಾಯಧನ ನೀಡಲು ಚಿಂತನೆ ನಡೆಸಿದೆ.

ರಾಜ್ಯದ ಕುಂಬಾರ, ಕಮ್ಮಾರ, ವಿಶ್ವಕರ್ಮ, ಬಡಗಿ, ಶಿಲ್ಪಿ ಸೇರಿದಂತೆ ಸಣ್ಣ ಕುಶಲಕರ್ಮಿಗಳಿಗೆ ಸರ್ಕಾರ ಸಾಲ, ಸಹಾಯಧನ ನೀಡುವ ಹೊಸ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ .

ಈ ವಿಶೇಷ ಯೋಜನೆಯಡಿ ಬ್ಯಾಂಕ್ ಗಳಿಂದ ತಲಾ 50,000 ರೂಪಾಯಿ ಸಾಲ-ಸಹಾಯ ಧನ ನೀಡಲಾಗುತ್ತಿದ್ದು, ಇದರಲ್ಲಿ 35, 000 ಸಾಲ ಹಾಗೂ 15,000 ಸಹಾಯ ಧನ ಸಿಗಲಿದೆ. ರಾಜ್ಯದಲ್ಲಿ ಸುಮಾರು 35,000 ಅತಿ ಸಣ್ಣ ನೊಂದಾಯಿತ ಕುಶಲಕರ್ಮಿಗಳಿದ್ದು, ನೊಂದಾಯಿಸಿಕೊಳ್ಳದ ಕುಶಲಕರ್ಮಿಗಳಿಗೂ ಸಾಲ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ.

ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ

ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ, ತರಬೇತಿ ನೀಡಿ, ಸಂಘದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ, ತರಬೇತಿ ನೀಡಿ, ಸಂಘದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ.ಈ ಯೋಜನೆಯಂತೆಯೇ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ಕಾಯಕವೇ ಕೈಲಾಸ ಎಂಬಂತೆ ದುಡಿಯುವ ಕೈಗಳಿಗೆ ಸರ್ಕಾರ ಉದ್ಯೋಗ ನೀಡುತ್ತಿದೆ. ಕಾಯಕನಿಷ್ಠೆ ಇರುವ ಸಮಾಜ ನಿರ್ಮಾಣವಾದಾಗ ಬಡತನವಿರುವುದಿಲ್ಲ. ಸಮಾನತೆಯನ್ನು ಸ್ಥಾಪಿಸಿ ಆರ್ಥಿಕ ಅಭಿವೃದ್ಧಿ ಮಾಡಲಾಗುವುದು ಎಂದರು.

BIGG NEWS : ವಿಧಾನಸಭಾ ಚುನಾವಣೆ ಬಳಿಕವೇ ‘BBMP’ ಎಲೆಕ್ಷನ್.?

SHOCKING NEWS: ಶ್ರದ್ಧಾ ಹತ್ಯೆ ಬೆನ್ನಲ್ಲೇ ಮತ್ತೊಂದು ಭೀಕರ ಘಟನೆ: ಯುಪಿಯಲ್ಲಿ ಹೆಂಡತಿಯನ್ನು ತುಂಡರಿಸಿ ವಿಲೇವಾರಿ ಮಾಡಿದ ಪತಿ

Share.
Exit mobile version