ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ರೇಷ್ಮೆ ಇಲಾಖೆಯಲ್ಲಿ ರೈತರಿಗೆ ಹಲವು ಯೋಜನೆಗಳು ಮತ್ತು ಸಹಾಯಧನ ನೀಡುತ್ತಿದ್ದು, ಅವುಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ರೇಷ್ಮೆ ಹುಳು ಸಾಕಾಣಿಕೆ (ಸುಧಾರಿತ ಮೌಂಟೇಜಸ್‌ಗಳು ಸೇರಿದಂತೆ) ಸಲಕರಣೆಗಳ/ಹಿಪ್ಪುನೇರಳೆ ತೋಟ
ನಿರ್ವಹಣಾ ಸಲಕರಣೆಗಳ ಖರೀದಿಗೆ ಸಹಾಯಧನ:
ಈ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ರೇಷ್ಮೆ ಬೆಳೆಗಾರರಿಗೆ ಸೌಲಭ್ಯ ಒದಗಿಸುವ ಹಿತದೃಷ್ಟಿಯಿಂದ ಸಲಕರಣೆ ಖರೀದಿಗೆ ಘಟಕ ದರ ರೂ.75.000/- ನಿಗದಿಪಡಿಸಿದ್ದು, ಸಹಾಯಧನ ರೂ.56250/-(ಶೇಕಡ 75), ಸಲಕರಣೆ ಖರೀದಿಗೆ ಹೊಸ ರೈತರಿಗೆ ಮೊದಲ ಆಧ್ಯತೆ ನೀಡುವುದು.
1. ಮೈಸೂರು ಶುದ್ಧ ತಳಿ/ದ್ವಿತಳಿ/ಸುಧಾರಿತ ಮಿಶ್ರ ತಳಿ ಗೂಡು ಬೆಳೆಯುವ ರೇಷ್ಮೆ ಬೆಳೆಗಾರರನ್ನು ಸಲಕರಣೆ ಖರೀದಿಗೆ ಸಹಾಯಧನ ನೀಡಲು ಆಯ್ಕೆ ಮಾಡಬೇಕು.
2. ಇಲಾಖೆಯ ಖರೀದಿ ಸಮಿತಿ ಅನುಮೋದಿಸುವ ಸಲಕರಣೆಗಳ ಘಟಕ ದರಮಿತಿಗೆ ಒಳಪಟ್ಟು ಅನುಮೋದಿತ ಸಂಸ್ಥೆಗಳಿಂದ ಮಾತ್ರ ಖರೀದಿಸಬೇಕು.
3. ಇಲಾಖೆಯು ಅನುಮೋದಿಸುವ ಸಲಕರಣೆಗಳನ್ನು ಖರೀದಿಸಬಹುದಾಗಿದೆ. ಈ ಕುರಿತು ರೇಷ್ಮೆ ನಿರ್ದೇಶನಾಲಯದಿಂದ ಪ್ರತ್ಯೇಕ ಸುತ್ತೋಲೆ ನೀಡಲಾಗುವುದು.
4. ಹುಳು ಸಾಕಾಣಿಕೆ ಮಾಡುವ ಬಗ್ಗೆ ಚಾಲ್ತಿಯಲ್ಲಿರುವ ಪಾಸ್ ಪುಸ್ತಕ/ರೇಷ್ಮೆ ಕಾರ್ಡ್ ಹೊಂದಿರಬೇಕು.
5. ಹುಳು ಸಾಕಾಣಿಕೆಯನ್ನು ಮುಂದಿನ 3 ವರ್ಷಗಳವರೆಗೆ ಮುಂದುವರೆಸಿಕೊಂಡು ಹೋಗುವ ಬಗ್ಗೆ ರೂ.50/-ಗಳ ಛಾಪಾಕಾಗದದಲ್ಲಿ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪಡೆಯಬೇಕು.
6. ರೇಷ್ಮೆ ಬೆಳೆಗಾರರು ಸಲಕರಣೆ ಸರಬರಾಜು ಪಡೆಯಲು ಇಚ್ಛಿಸುವ ಸಲಕರಣೆ ಮತ್ತು ಸಂಸ್ಥೆಗಳ ವಿವರಗಳನ್ನು ರೇಷ್ಮೆ ಬೆಳೆಗಾರರಿಂದ ಪಡೆಯುವ ಕೋರಿಕೆಯ ಅರ್ಜಿಯಲ್ಲಿ ವಿವರಗಳನ್ನು ಪಡೆಯುವುದು.
7. ಸಲಕರಣೆಗಳ ಸರಬರಾಜು ಪಡೆದು ಸಹಾಯಧನ ವಿತರಣೆ :
ಇಲಾಖೆಯು ಅನುಮೋದಿಸಿ empanel ಮಾಡಿರುವ ಸಂಸ್ಥೆಗಳಿಂದ ಮಾತ್ರ ಸಲಕರಣೆಗಳನ್ನು ಸರಬರಾಜು ಪಡೆಯುವುದು ಕಡ್ಡಾಯವಾಗಿದೆ.
ರೇಷ್ಮೆ ಬೆಳೆಗಾರರು ಸಲಕರಣೆಗಳ ಸಂಪೂರ್ಣ ಮೊತ್ತವನ್ನು ಪಾವತಿಸಿ empanel ಮಾಡಿರುವ ಸಂಸ್ಥೆಗಳಿಂದ ಸರಬರಾಜು ಪಡೆದಿದ್ದಲ್ಲಿ ಸಹಾಯಧನದ ಮೊತ್ತವನ್ನು ಖಜಾನೆ 2/໖໖໖ ಮುಖಾಂತರ ರೇಷ್ಮೆ ಬೆಳೆಗಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾಮಾಡುವುದು. ಬ್ಯಾಂಕ್/ಸಂಘ ಸಂಸ್ಥೆಗಳಿಂದ ಸಾಲ ಪಡೆದಿದ್ದಲ್ಲಿ ಸಹಾಯಧನವನ್ನು ಬ್ಯಾಂಕಿಗೆ ಜಮಾ ಮಾಡುವುದು.
ಸಂಬಂಧಿಸಿದ ಜಿಲ್ಲೆಯ ಇಲಾಖಾ ಅಧಿಕಾರಿಗಳು ರೇಷ್ಮೆ ಬೆಳೆಗಾರರ ವತಿಯಿಂದ ಫಲಾನುಭವಿ ವಂತಿಕೆಯಾಗಿ ಶೇಕಡ 25ರಷ್ಟನ್ನು empanel ಸಂಸ್ಥೆಗೆ ಡಿಮಾಂಡ್ ಡ್ರಾಪ್ಟ್ ಮುಖಾಂತರ ಪಾವತಿಸಿ ಸಲಕರಣೆಗಳನ್ನು ರೇಷ್ಮೆ ಬೆಳೆಗಾರರಿಗೆ ಸರಬರಾಜು ಮಾಡಿರುವುದನ್ನು ಖಾತ್ರಿ ಪಡಿಸಿಕೊಂಡು, ರೇಷ್ಮೆ ಬೆಳೆಗಾರರಿಂದ ಸರಬರಾಜು ಸಂಸ್ಥೆಗೆ ಸಹಾಯಧನ ಮೊತ್ತ ಪಾವತಿಸಲು ಯಾವುದೇ ನಿರಾಕ್ಷೇಪಣೆ ಇರುವುದಿಲ್ಲವೆಂಬ ಬಗ್ಗೆ No objection certificate (NOC) ರೇಷ್ಮೆ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಿರಾಕ್ಷೇಪಣಾ ಪತ್ರಕ್ಕೆ ರೇಷ್ಮೆ ಬೆಳೆಗಾರರು ಸಹಿ ಮಾಡಿ ನೀಡಿದ್ದಲ್ಲಿ ಸಹಾಯಧನದ ಮೊತ್ತವನ್ನು ಸಲಕರಣೆ ಸರಬರಾಜು ಮಾಡಿದ ಸಂಸ್ಥೆಗೆ ಖಜಾನೆ-2/ಡಿಬಿಟಿ ಮುಖಾಂತರ ಸಂಸ್ಥೆಯ ಬ್ಯಾಂಕ್ ಖಾತೆಗೆ ಪಾವತಿಸಬಹುದಾಗಿದೆ.
8. ಸಹಾಯಧನ ಪಡೆಯುವ ಫಲಾನುಭವಿಯೊಂದಿಗೆ ಇಲಾಖಾ ಸಿಬ್ಬಂದಿ/ಅಧಿಕಾರಿಗಳು ಖರೀದಿಸಿರುವ ಸಲಕರಣೆಗಳ ಜೊತೆಯಲ್ಲಿ ಛಾಯಾಚಿತ್ರ ತೆಗೆಯಿಸಿ ಸಲ್ಲಿಸಬೇಕು.
9. ಇಲಾಖೆಯು ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿ, ಮಹಜರ್, ಶಿಫಾರಸ್ಸು/ದೃಢೀಕರಣಗಳಿರಬೇಕು.









