ಹಾಸನ : ಸರ್ಕಾರ ಮಾಡಿರುವ ಉತ್ತಮ ಕೆಲಸಗಳು ಜನರಿಗೆ ಕಾಣಬೇಕು ಈ ನಿಟ್ಟಿನಲ್ಲಿ ಡಿ.6 ರಂದು ಹಾಸನದಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಣೆ ಮಾಡುವುದರ ಮೂಲಕ ಸಹಕರಿಸುವಂತೆ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಆದಂತಹ ಕೆಲಸಗಳನ್ನು ಜನರಿಗೆ ಸಮರ್ಪಣೆ ಮಾಡಲಾಗುತ್ತಿದೆ ಎಂದ ಅವರು ಕಂದಾಯ ಇಲಾಖೆ ಗಣನೀಯವಾಗಿ ಪ್ರಗತಿ ಸಾಧಿಸಿದೆ ಎಂದ ಅವರು 14 ವರ್ಷದಲ್ಲಿ 2444 ರೈರಿಗೆ ಪೋಡಿ ದುರಸ್ತು ಮಾಡಿಕೊಂಡಲಾಗಿದೆ ಆದರೆ 2025ರ ಜನವರಿಯಿಂದ ಇಲ್ಲಿಯವರೆಗೆ 21,631 ಜಮೀನುಗಳನ್ನು ಅಳತೆ ಮಾಡಲಾಗಿದೆ ಇದರಲ್ಲಿ 10 ಸಾವಿರ ಆರ್.ಟಿ.ಸಿ ಆಗಿದೆ ಉಳಿದವು ಕೂಡ ಮುಂದಿನ ದಿನಗಳಲ್ಲಿ ಆರ್.ಟಿ,ಸಿ ಮಾಡಲಾಗುವುದು ಎಂದರು.
ಪೌತಿ ಖಾತೆ ಆಂದೋಲನ
ವೇದಿಕೆಯ ಕಾರ್ಯಕ್ರಮ 11 ಗಂಟೆಗೆ ಪ್ರಾರಂಭ ಮಾಡಲೇಬೇಕು 2.30 ಕ್ಕೆ ಕಾರ್ಯಕ್ರಮ ಮುಗಿಯಬೇಕು ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಂಬAಧಪಟ್ಟ ವಿ.ಎ ಮತ್ತು ಪಿಡಿಓಗಳು ತಾವು ಕರೆತಂದ ಫಲಾನುಭವಿಗಳನ್ನು ಕಾರ್ಯಕ್ರಮದ ನಂತರ ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸಬೇಕು. ಹೋಗುವಾಗ ಅವರ ಕೈಯಲ್ಲಿ ದಾಖಲೆಗಳಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಹೆಸರಿನಲ್ಲಿ ಯಾವುದೇ ದುಂದು ವೆಚ್ಚ ಮಾಡುವಂತಿಲ್ಲ. ಸಮಯವನ್ನೂ ವ್ಯರ್ಥಗೊಳಿಸುವಂತಿಲ್ಲ ಆಡಂಬರ ಬೇಡ ಸರಳವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅರಸೀಕೆರೆಯಲ್ಲಿ 94ಡಿ 1000 ಜನಕ್ಕೆ ಹಕ್ಕುಪತ್ರ ಹಾಗೂ ಸಕಲೇಶಪುರದಲ್ಲಿ 94ಸಿಯಲ್ಲಿ 500 ಜನರಿಗೆ ಎಲ್ಲಾ ತಾಲ್ಲೂಕು ಸೇರಿದಂತೆ 3000 ಜನರಿಗೆ ನೀಡುವುದರಿಂದ 25.000 ಕುಟುಂಬಗಳಿಗೆ ಕೆಲಸ ಮಾಡಿಕೊಂಡಲಾಗಿದೆ ಕನಿಷ್ಠ 1 ಪೋಡಿ ಮಾಡಿಕೊಟ್ಟರೆ 03 ಕುಟುಂಬಗಳಿಗೆ 30 ರಿಂದ 60 ವರ್ಷದ ಹಿಂದಿನ ಜಮೀನುಗಳಿಗೆ ಪೋಡಿ ಮಾಡಿ ಕೋಡುವುದಂರಿAದ ಇರುತ್ತದೆ ಮೂಲ ಮಂಜೂರಿದಾರರು ಕೆಲವರು ಮೃತಪಟ್ಟಿದ್ದಾರೆ ಆದರೆ ವಾಸುದಾರರಿಗೆ ಇದರಿಂದ ಕನಿಷ್ಠ 2 ಕುಟುಂಬಗಳು ಅದರೆ 25000 ಪೋಡಿ ಮಾಡಿದರೆ 50 ರಿಂದ 60 ಸಾವಿರ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಅವರ ಮಕ್ಕಳು, ಮೊಮ್ಮಕ್ಕಳಿಗೆ ಜಮೀನು ದಾಖಲೆಗಳು ದೊರೆತಂತಾಗುತ್ತದೆ ಎಂದರು,
ಮೀಷನ್ ಮೋಡ್ ನಲ್ಲಿ ನಾವೇ ತೆಗೆದುಕೊಂಡು ಅವರ ಮನೆಯ ಬಾಗಿಲಿಗೆ ಕೆಲಸ ಮಾಡಿದ್ದೇವೆ ಅಲ್ಲದೆ ಪೌತಿ ಖಾತೆ ಅಭಿಯಾನ ಪ್ರಾರಂಭಿಸಿ ವಾರಸುದಾರರಿಗೆ ಖಾತೆ ಮಾಡಿಕೊಡಲಾಗುತ್ತಿದೆ ಹಾಸನ ಜಿಲ್ಲೆಯಲ್ಲಿ 15 ಸಾವಿರ ಮರಣ ಹೊಂದಿರುವವರ ಕುಟುಂಬದವರ ವಾರಸುದಾರರಿಗೆ ಪೌತಿ ಖಾತೆ ಮಾಡಿಕೊಡಲಾಗುತ್ತಿದೆ. ಇದನ್ನು ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಜನರಿಗೆ ಸಮರ್ಪಣೆ ಮಾಡಲಾಗುತ್ತಿದೆ ಎಂದರು.
ಕಳೆದ ಸರ್ಕಾರದ ಅವಧಿಯಲ್ಲಿ 94ಸಿ ಹಾಗೂ 94ಡಿ ಅಡಿಯಲ್ಲಿ 2.50 ಲಕ್ಷ ಹಕ್ಕುಪತ್ರ ನೀಡಿದ್ದರೂ ಸಹ 10600 ಮಾತ್ರ ಇ-ಸ್ವತ್ತು ಆಗಿದೆ. ನಾಮಕಾವಸ್ತೆ ಹಕ್ಕುಪತ್ರ ನೀಡುವ ಪ್ರವೃತ್ತಿ ಇನ್ನಾದರೂ ನಿಲ್ಲಬೇಕು. ಗ್ರಾಮ ಪಂಚಾಯತ್ ನಲ್ಲಿ ಎಲ್ಲಾ ಹಕ್ಕುಪತ್ರಕ್ಕೂ ಕಡ್ಡಾಯವಾಗಿ ಇ- ಸ್ವತ್ತು ಮಾಡಕೊಡಲೇಬೇಕು. ಫೌತಿಖಾತೆ ಆಂದೋಲನವನ್ನು ಯಾವ ಕಾರಣಕ್ಕೂ ನಿಲ್ಲಿಸುವಂತಿಲ್ಲ. ಮೃತರ ಹೆಸರಲ್ಲಿರುವ ಜಮೀನನ್ನು ಈಗಿನ ವಾರಸುದಾರರ ಹೆಸರಿಗೆ ಬದಲಿಸಲೇಬೇಕು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮಟ್ಟದಲ್ಲೂ ನೋಡಲ್ ಆಫೀಸರ್ ಗಳನ್ನ ನೇಮಕ ಮಾಡಿ ಫಲಾನುಭವಿಗಳನ್ನು ಯಾವುದೇ ಸಮಸ್ಯೆ ಇಲ್ಲದಂತೆ ಕಾರ್ಯಕ್ರಮಕ್ಕೆ ಕರೆತರಬೇಕು ಎಂದರು.








