ಬೆಂಗಳೂರು : 2025-26ನೇ ಸಾಲಿಗೆ ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರವು ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1) ರ ಸರ್ಕಾರದ ಆದೇಶದಲ್ಲಿ, 2025-26ನೇ ಸಾಲಿಗೆ ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಸುಮಾರು 40.68 ಲಕ್ಷ ವಿದ್ಯಾರ್ಥಿಗಳಿಗೆ ಮೊದಲನೇ ಜೊತೆ ಉಚಿತ ಸಮವಸ್ತ್ರವನ್ನು 2025-26 ನೇ ಸಾಲಿನ ಆಯವ್ಯಯದ ವಿದ್ಯಾವಿಕಾಸ ಯೋಜನೆಯ ಲೆಕ್ಕ ಶೀರ್ಷಿಕೆ :2202-01-109-0-03-221/422/423 ರಡಿಯಲ್ಲಿ ಲಭ್ಯವಾಗುವ ಅನುದಾನದಿಂದ ರೂ.84.73 ಕೋಟಿ ವೆಚ್ಚ ಭರಿಸಲು ಹಾಗೂ ಎರಡನೇ ಜೊತೆ ಸಮವಸ್ತ್ರವನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಪಿ.ಎ.ಬಿ ಅನುಮೋದಿತ ಅನುದಾನದಿಂದ ರೂ.82.43 ಕೋಟಿ ವೆಚ್ಚ ಭರಿಸಲು ಒಟ್ಟಾರೆಯಾಗಿ ರೂ. ಎರಡು ಜೊತೆ ಸಮವಸ್ತ್ರಗಳನ್ನು ರೂ. 167.16 ಕೋಟಿ ವೆಚ್ಚದಲ್ಲಿ ಉಚಿತವಾಗಿ ಸರಬರಾಜು ಮಾಡಲು ಆಯಕ್ತರು, ಶಾಲಾ ಶಿಕ್ಷಣ ಇವರಿಗೆ ಕೆಲವು ಷರತ್ತುಗಳನ್ನು ವಿಧಿಸಿ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.
ಮೇಲೆ ಓದಲಾದ ಕ್ರಮಾಂಕ (2)ರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರ ಪಸ್ತಾವನೆಯಲ್ಲಿ 2025-26ನೇ ಸಾಲಿಗೆ ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಮೊದಲನೇ ಜೊತೆ ಉಚಿತ ಸಮವಸ್ತ್ರ, ವಿತರಣೆ ಕಾರ್ಯಕ್ಕಾಗಿ ರೂ.84.73 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಟೆಂಡರ್ ಮೊತ್ತ ಕಡಿಮೆಯಾದ ಹಿನ್ನೆಲೆಯಲ್ಲಿ ನಿಗದಿಪಡಿಸಲಾದ ಮೊತ್ತವನ್ನು ಪರಿಷ್ಕರಿಸಿ ರೂ.83.08 ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕೋರಿರುತ್ತಾರೆ.
2025-26ನೇ ಸಾಲಿನ ಆಯವ್ಯಯದಲ್ಲಿ ವಿದ್ಯಾವಿಕಾಸ ಯೋಜನೆಯ 01 ನೇ ಜೊತೆ ಸಮವಸ್ತ್ರಕ್ಕೆ ರೂ.84.73 ಕೋಟಿ ಅನುದಾನ ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಇಲಾಖೆಯ ಕೋರಿಕೆಯಂತೆ, 2025-26 ನೇ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ, ಬಟ್ಟೆ ಸರಬರಾಜು ಮಾಡಿದ ಕೆ.ಹೆಚ್.ಡಿ.ಸಿ ಹಾಗೂ ಇ-ಟೆಂಡರ್ ಅರ್ಹತೆ ಪಡೆದು ಸರಬರಾಜು ಮಾಡಿರುವ ಸಂಸ್ಥೆಗಳಿಗೆ ಒಟ್ಟು ರೂ.83.07 ಕೋಟಿ (ಎಂಬತ್ತೂರು ಕೋಟಿ ಏಳು ಲಕ್ಷಗಳು) ಅನುದಾನವನ್ನು ಈ ಕೆಳಕಂಡ ಲೆಕ್ಕ ಶೀರ್ಷಿಕೆಗಳಡಿ ಲಭ್ಯವಿರುವ ಅನುದಾನದಿಂದ ಬಿಡುಗಡೆ ಮಾಡಿ ನಿಯಮಾನುಸಾರ ಭರಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿ ನೀಡಿ ಆದೇಶಿಸಿದೆ.









