ಬೆಂಗಳೂರು : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪೊಲೀಸ್ ಇಲಾಖೆಯಲ್ಲಿ 4600 ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪೊಲೀಸ್ ಇಲಾಖೆಯಲ್ಲಿ 4600 ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ 2-3 ದಿನದಲ್ಲಿ ಅಧಿಸೂಚನೆ ಹೊರಡಿಸಲಾಗುವುದು.ಈ ಕುರಿತಾದ ಕಡತವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ಒಂದೇ ಬಾರಿ ನೇಮಕ ಮಾಡಿಕೊಂಡರೆ ಪೂರಕ ತರಬೇತಿ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಖಾಲಿ ಇರುವ 15000 ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳನ್ನು ಒಂದು ಬಾರಿಗೆ 5 ಸಾವಿರದಂತೆ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 545 ಸಬ್ ಇನ್ಸ್ಪೆಕ್ಟರ್ ನೇಮಕಾತಿ ನಡೆಯುತ್ತಿದ್ದು, ತರಬೇತಿ ನೀಡಲಾಗುತ್ತಿದೆ. ಮುಂದಿನ 4 ತಿಂಗಳಲ್ಲಿ ಎಲ್ಲರೂ ಇಲಾಖೆಗೆ ಸೇರಲಿದ್ದಾರೆ. 402 ಸಬ್ ಇನ್ಸ್ಪೆಕ್ಟರ್ ನೇಮಕಾತಿಗೆ ಆದೇಶ ನೀಡಲಾಗಿದ್ದು, ಇನ್ನು 2-3 ದಿನಗಳಲ್ಲಿ 4600 ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.








