ನವದೆಹಲಿ : ಈ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ವಿಭಿನ್ನ ಪ್ರವೃತ್ತಿಗಳು ಕಂಡುಬಂದಿವೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಾರ, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ನವೆಂಬರ್ 29ರ ಶನಿವಾರ, ಚಿನ್ನದ ಬೆಲೆ 10 ಗ್ರಾಂಗೆ 1,437 ರೂಪಾಯಿ ಇಳಿಕೆಯಾಗಿದ್ದು, ಈಗ 76,187 ರೂ.ಗೆ ಇಳಿದಿದೆ. ಇನ್ನು ಬೆಳ್ಳಿಯ ಬೆಲೆ ಕಳೆದ ಶನಿವಾರ ಪ್ರತಿ ಕೆ.ಜಿ.ಗೆ 89,383 ರೂಪಾಯಿ ಇತ್ತು. ಇಂದು 90,820 ರೂ.ಗೆ ಏರಿದೆ, ಅಂದರೆ ಬೆಳ್ಳಿಯ ಬೆಲೆ ಈ ವಾರ 1,437 ರೂಪಾಯಿ ಹೆಚ್ಚಳವಾಗಿದೆ.
ಮಹಾನಗರಗಳಲ್ಲಿ ಚಿನ್ನದ ಬೆಲೆ.!
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್’ನ 10 ಗ್ರಾಂ ಚಿನ್ನದ ಬೆಲೆ 71,300 ರೂಪಾಯಿ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 77,770 ರೂಪಾಯಿ ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್’ನ 10 ಗ್ರಾಂ ಚಿನ್ನದ ಬೆಲೆ 71,150 ರೂಪಾಯಿ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 77,620 ರೂಪಾಯಿ ಇದೆ.
ಕೋಲ್ಕತಾದಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 71,150 ರೂ ಮತ್ತು 24 ಕ್ಯಾರೆಟ್ ಚಿನ್ನ 77,620 ರೂಪಾಯಿ ದಾಖಲಾಗಿದೆ.
ಬಾಂಗ್ಲಾದಲ್ಲಿ ಮತ್ತೊಂದು ದೇಗುಲದ ಮೇಲೆ ದಾಳಿ ; ಢಾಕಾದ ‘ಇಸ್ಕಾನ್’ ಕೇಂದ್ರ ಧ್ವಂಸ, ವಿಗ್ರಹ ಸುಟ್ಟು ವಿಧ್ವಂಸ
ಸಮಾಜದ ಪ್ರತಿಯೊಂದು ವರ್ಗಕ್ಕೂ ಶಾಲಾ ಶಿಕ್ಷಣವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ : ಪ್ರಧಾನಿ ಮೋದಿ