ಬೆಂಗಳೂರು : ಯಜಮಾನಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿಸುದ್ದಿಯೊಂದನ್ನು ನೀಡಿದ್ದು, ಶೀಘ್ರವೇ ಏಪ್ರಿಲ್, ಮೇ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳಿಂದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಹಣ ಜಮಾ ಮಾಡಿಲ್ಲ. ಮಾರ್ಚ್ ವರ್ಷಾಂತ್ಯವಾಗಿದ್ದ ಕಾರಣ ಸಮಸ್ಯೆಯಾಗಿದೆ,ಏಪ್ರಿಲ್, ಮೇ ತಿಂಗಳ ಹಣ ಜಮಾ ಮಾಡಿಲ್ಲ. ಮಾರ್ಚ್ ತಿಂಗಳದ್ದು ಹೆಚ್ಚು ಕಡಿಮೆ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ.
ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಜಮಾ ಮಾಡಿಲ್ಲ. ಶೀಘ್ರವೇ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನಿಮಗೆ ಗೃಹ ಲಕ್ಷ್ಮೀ ಯೋಜನೆ ಹಣ ( Gruhalkahsmi Scheme ) ಬಂದಿದ್ಯಾ ಅಂತ ಹೀಗೆ ಚೆಕ್ ಮಾಡಿ
ಹಂತ 1: ನಿಮ್ಮ ಪೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ, DBT Karnataka application ಅಂತ ಟೈಪ್ ಮಾಡಿ ಸರ್ಚ್ ಮಾಡಿ, ಡೌನ್ ಲೋಡ್ ಮಾಡಿಕೊಳ್ಳಿ.
ಹಂತ 2: ಫಲಾನುಭವಿಯ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ಹಂತ 3: ಆಗ ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ಅದನ್ನು ನಮೂದಿಸಿ, ಗೆಟ್ ಓಟಿವಿ ನೀಡಿ, ಓಟಿಪಿ ಬಂದ ನಂತ್ರ, ವೆರಿಫೈ ಓಟಿಪಿಯ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ಇಲ್ಲಿ ನೀವು ಪಾಸ್ವರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ಹಂತ 4: ಈಗ ಹೋಂ ಪೇಜ್ ನಲ್ಲಿ ನೀವು Payment status ಮೇಲೆ ಕ್ಲಿಕ್ ಮಾಡಿ. ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಪಕ್ಕದಲ್ಲಿರುವ Seeding status of Adhaar in bank account ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ಮತ್ತು ಯಾವ ಬ್ಯಾಂಕಿಗೆ ಸೀಡಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು
ಹಂತ 5: ಇಲ್ಲಿ ನಿಮಗೆ ಸರ್ಕಾರದಿಂದ ಜಮಾ ಆಗಿರುವಂತ ಗೃಹ ಲಕ್ಷ್ಮೀ ಯೋಜನೆಯ ಹಣ ವರ್ಗಾವಣೆಯಾಗಿರುವುದು ತಿಳಿಯಲಿದೆ.