ನವದೆಹಲಿ : ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್ ಸಮ್ಮಾನ್ ನಿಧಿ) ಯೋಜನೆಯು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಪರಿಹಾರವನ್ನ ಒದಗಿಸುತ್ತದೆ. ಈ ಯೋಜನೆಯಡಿ, ರೈತರಿಗೆ ವರ್ಷಕ್ಕೆ ಮೂರು ಬಾರಿ ತಲಾ 2,000 ರೂ.ಗಳ ಸಹಾಯವನ್ನ ನೀಡಲಾಗುತ್ತದೆ, ಇದರಿಂದಾಗಿ ಅವರು ಒಟ್ಟು 6,000 ರೂ.ಗಳ ವಾರ್ಷಿಕ ಲಾಭವನ್ನು ಪಡೆಯುತ್ತಾರೆ.
19ನೇ ಕಂತಿನ ಮೇಲೆ ಎಲ್ಲರ ಕಣ್ಣು.!
ಈ ಬಾರಿ 19ನೇ ಕಂತಿನ ಯೋಜನೆಗಾಗಿ ರೈತರು ಕಾತರದಿಂದ ಕಾಯುತ್ತಿದ್ದಾರೆ. ಈ ಕಂತು ಜನವರಿ 18, 2025 ರಂದು ಬಿಡುಗಡೆಯಾಗಬಹುದು ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಹೀಗಿರುವಾಗ ಈ ದಿನಾಂಕದ ಬಗ್ಗೆ ರೈತರಲ್ಲಿ ಚರ್ಚೆ ಜೋರಾಗಿದೆ.
ಮಾಧ್ಯಮ ವರದಿಗಳು ಏನು ಹೇಳುತ್ತವೆ.?
ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ 19ನೇ ಕಂತು ಜನವರಿ 18 ರಂದು ಬಿಡುಗಡೆಯಾಗಬಹುದು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಆದ್ರೆ, ಯೋಜನೆಯ ಅಧಿಕೃತ ವೆಬ್‌ಸೈಟ್’ನಲ್ಲಿ ಅಂತಹ ಯಾವುದೇ ಮಾಹಿತಿಯನ್ನು ಇನ್ನೂ ನೀಡಲಾಗಿಲ್ಲ.
ಅಧಿಕೃತ ಪೋರ್ಟಲ್ ಸ್ಥಿತಿ.!
ಪಿಎಂ ಕಿಸಾನ್ ಯೋಜನೆಯ ವೆಬ್‌ಸೈಟ್’ನಲ್ಲಿ 19ನೇ ಕಂತಿನ ದಿನಾಂಕವನ್ನ ಇನ್ನೂ ಘೋಷಿಸಲಾಗಿಲ್ಲ. ಅಕ್ಟೋಬರ್ 5, 2024ರಂದು ಬಿಡುಗಡೆಯಾದ ಪೋರ್ಟಲ್’ನಲ್ಲಿ 18 ನೇ ಕಂತಿನ ಬಗ್ಗೆ ಮಾತ್ರ ಮಾಹಿತಿಯನ್ನು ನೀಡಲಾಗಿದೆ.
ರೈತ ಇ-ಮಿತ್ರ ಅವರ ಉತ್ತರ.!
ಸ್ಕೀಮ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ ರಚಿಸಲಾದ ಕಿಸಾನ್ ಇ-ಮಿತ್ರ ಚಾಟ್ ಬಾಕ್ಸ್’ನಲ್ಲಿ 19ನೇ ಕಂತಿನ ದಿನಾಂಕವನ್ನ ಕೇಳಿದಾಗ, ಡಿಸೆಂಬರ್ 2024 ಮತ್ತು ಮಾರ್ಚ್ 2025ರ ನಡುವೆ ಯಾವುದೇ ಸಮಯದಲ್ಲಿ ಈ ಕಂತನ್ನು ಬಿಡುಗಡೆ ಮಾಡಬಹುದು ಎಂಬ ಉತ್ತರವಾಗಿತ್ತು. ಆದರೆ, ಇನ್ನೂ ನಿಗದಿತ ದಿನಾಂಕವನ್ನು ಪ್ರಕಟಿಸಿಲ್ಲ.
ಜನವರಿ 18ಕ್ಕೆ ಕಂತು ಬರುವ ಸಾಧ್ಯತೆ.!
19ನೇ ಕಂತು ಜನವರಿ 18ಕ್ಕೆ ಬಿಡುಗಡೆಯಾಗಲಿದೆ ಎಂಬ ಹೇಳಿಕೆಯನ್ನು ಸದ್ಯಕ್ಕೆ ಅಧಿಕೃತವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಈ ದಿನಾಂಕವು ಕೇವಲ ಊಹಾಪೋಹಗಳನ್ನ ಆಧರಿಸಿದೆ, ಏಕೆಂದರೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
2024-25ನೇ ಸಾಲಿನ ‘GDP’ ಬೆಳವಣಿಗೆ ದರ ಶೇ.6.4ಕ್ಕೆ ಏರಿಕೆ : ‘FICCI’ ಆರ್ಥಿಕ ಮುನ್ನೋಟ ಸಮೀಕ್ಷೆ
ಕೆಪಿಸಿಸಿ ಹುದ್ದೆ ಅಂಗಡಿಯಲ್ಲಿ, ಮಾಧ್ಯಮಗಳ ಮುಂದೆ ಮಾತನಾಡಿದರೂ ಸಿಗೋದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್