ಬೆಂಗಳೂರು: ಸಿಂಗದೂರು ಕೇಬಲ್ ಬ್ರಿಡ್ಜ್ ಉದ್ಘಾಟನೆಯ ಬಳಿಕ ನೋಡೋದಕ್ಕೆ ತೆರಳೋರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಿಂದ ಸಿಗಂದೂರು ಸೇತುವೆ ನೋಡೋ ಪ್ಲಾನ್ ಮಾಡಿದ್ದರೇ, ಕೆ ಎಸ್ ಆರ್ ಟಿಸಿ ನೇರವಾಗಿ ಬಸ್ ಸಂಚಾರದ ವ್ಯವಸ್ಥೆ ಮಾಡಿ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೆ ಎಸ್ ಆರ್ ಟಿ ಸಿಯು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಸಿಗಂದೂರು ವಯಾ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ ಮಾರ್ಗದಲ್ಲಿ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ದಿನಾಂಕ 22-08-2025 ರಿಂದ ಪ್ರಾರಂಭಿಸಿ ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದಿದೆ.
ಹೀಗಿದೆ ವೇಳಾಪಟ್ಟಿ ಮತ್ತು ಪ್ರಯಾಣದರ
ಬೆಂಗಳೂರಿನಿಂದ ಸಿಗಂದೂರಿಗೆ ರೂ.950 ದರವನ್ನು ನಾನ್ ಎಸಿ ಸ್ಲೀಪರ್ ಬಸ್ಸಿಗೆ ನಿಗದಿ ಪಡಿಸಲಾಗಿದೆ. ಈ ಬಸ್ಸು ರಾತ್ರಿ 9.40ಕ್ಕೆ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ಸಿಗಂದೂರು ತಲುಪಲಿದೆ.
ಸಿಗಂದೂರನ್ನು ರಾತ್ರಿ 8 ಗಂಟೆಗೆ ಬಿಟ್ಟು, ಬೆಂಗಳೂರನ್ನು ಮರುದಿನ ಬಳಗ್ಗೆ 4.15ಕ್ಕೆ ತಲುಪಲಿದೆ ಎಂಬುದಾಗಿ ಕೆ ಎಸ್ ಆರ್ ಟಿ ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕ ಪ್ರಯಾಣಿಕರು ಮೇಲೆ ತಿಳಿಸಿರುವ ನಾನ್ ಎಸಿ ಸ್ಲೀಪರ್ ವಾಹನದ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ. ಮುಂಗಡ ಟಿಕೇಟ್ ಬುಕ್ಕಿಂಗ್‌ಗಾಗಿ ವೆಬ್ ಸೈಟ್: www.ksrtc.in & www.ksrtc.karnataka.gov.in ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 080-26252625 /7760990100 /7760990560/7760990287.
ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಕ್ ಆಯ್ಕೆ: ಅವರು ಹೇಳಿದ್ದೇನು ಗೊತ್ತಾ?