ಬೆಂಗಳೂರು : 60 ವರ್ಷ ಮೇಲ್ಪಟ್ಟ ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕ ಮಂಡಳಿಯು ಸಿಹಿಸುದ್ದಿ ನೀಡಿದ್ದು, ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
60 ವರ್ಷ ಮೇಲ್ಪಟ್ಟ ನೋಂದಾಯಿತ ಕಾರ್ಮಿಕರಿಗೆ ಮಂಡಳಿಯು ಮಾಸಿಕ ಪಿಂಚಣಿಯನ್ನು ನೀಡುತ್ತದೆ. ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
* ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ
* ಫಲಾನುಭವಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ
* ಜೀವಿತ ಪ್ರಮಾಣ ಪತ್ರ
* ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಪ್ರತಿ
* ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ