ಬೆಂಗಳೂರು: ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳಿಗೆ ಗುಡ್ ನ್ಯೂಸ್ ಎನ್ನುವಂತೆ 1.50 ಲಕ್ಷ ಸಬ್ಸಿಡಿಯೊಂದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡದವರು ಕನಿಷ್ಠ 10 ಸದಸ್ಯರು ಇರುವಂತ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ 1.50 ಸಬ್ಸಿಡಿ ಸಹಾಯಧನದೊಂದಿಗೆ 2 ಲಕ್ಷದವರೆಗೆ ಸಾಲ ಮತ್ತು ಸಹಾಯಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಘಟಕ ವೆಚ್ಚವಾಗಿ 2.50 ಲಕ್ಷವನ್ನು ಸಾಲ ಮತ್ತು ಸಹಾಯಧನವಾಗಿ ನೀಡಲಾಗುತ್ತದೆ. ಇದರಲ್ಲಿ 1.50 ಲಕ್ಷ ಸಹಾಯಧನವಾಗಿದ್ದರೇ, ರೂ.1 ಲಕ್ಷ ಸಾಲವಾಗಿದೆ. ಇದಕ್ಕೆ ಶೇ.4ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಅಕ್ಟೋಬರ್.23ರಿಂದ ಆರಂಭಗೊಳ್ಳಲಿದೆ. ನವೆಂಬರ್.23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9482300400ಗೆ ಕರೆ ಮಾಡಿ ಪಡೆಯಬಹುದಾಗಿದೆ.
2024 – 25ನೇ ಸಾಲಿನಲ್ಲಿ ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಕ್ಟೋಬರ್ 23 ರಿಂದ ನವೆಂಬರ್ 23ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482 300 400 ಸಂಪರ್ಕಿಸಬಹುದು. pic.twitter.com/vy1NVOVeLz
— DIPR Karnataka (@KarnatakaVarthe) October 16, 2024
BREAKING : ಚಿಕ್ಕಬಳ್ಳಾಪುರದಲ್ಲಿ ಭೀಕರ ಅಗ್ನಿ ಅವಘಡ : ಸುಟ್ಟು ಕರಕಲಾದ ಚಪ್ಪಲಿ ಶೋರೂಂ!
BREAKING : ಚಿಕ್ಕಬಳ್ಳಾಪುರದಲ್ಲಿ ಭೀಕರ ಅಗ್ನಿ ಅವಘಡ : ಸುಟ್ಟು ಕರಕಲಾದ ಚಪ್ಪಲಿ ಶೋರೂಂ!