ನವದೆಹಲಿ : ಮಹಿಳೆಯರನ್ನ ಎಲ್ಲ ಕ್ಷೇತ್ರಗಳಲ್ಲಿ ಪರಿಣತರನ್ನಾಗಿಸಲು ಸರ್ಕಾರ ಮಹತ್ವದ ಕ್ರಮಗಳನ್ನ ಕೈಗೊಳ್ಳುತ್ತಿದೆ. ಮಹಿಳೆಯರ ಆರ್ಥಿಕ ನೆರವಿನ ಭಾಗವಾಗಿ ಹಲವು ಯೋಜನೆಗಳನ್ನ ಜಾರಿಗೊಳಿಸಲಾಗುತ್ತಿದೆ. ಹೀಗಿರುವಾಗ ಮೋದಿ ಸರ್ಕಾರ ಮಹಿಳಾ ಲೋಕಕ್ಕೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಕೇಂದ್ರ ಸರ್ಕಾರ ಮಹಿಳೆಯರಿಗೆ ಮಾತ್ರ ನಮೋ ದೀದಿ ಯೋಜನೆಯನ್ನ ಪ್ರಾರಂಭಿಸಿದೆ. ಈ ಯೋಜನೆಯ ಭಾಗವಾಗಿ ಮಹಿಳಾ ಗುಂಪುಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಇದು ಕೃಷಿ ವಲಯದಲ್ಲಿ ಕೀಟನಾಶಕಗಳನ್ನ ಸಿಂಪಡಿಸಲು ಮಹಿಳಾ ಗುಂಪುಗಳಿಗೆ ನೆರವು ನೀಡುತ್ತದೆ.
ನಮೋ ಡ್ರೋನ್ ದೀದಿ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರವು ದೇಶದ ಪ್ರತಿ ಮಹಿಳಾ ಸ್ವಸಹಾಯ ಸಂಘಗಳಿಗೆ 8 ಲಕ್ಷದವರೆಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಇದರ ಭಾಗವಾಗಿ 14,500 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್’ಗಳನ್ನ ಒದಗಿಸುವ ಗುರಿಯನ್ನ ಕೇಂದ್ರ ಹೊಂದಿದೆ.
ಡ್ರೋನ್’ನ ಖರೀದಿ ಬೆಲೆಯ ಗರಿಷ್ಠ 80 ಪ್ರತಿಶತ ಅಥವಾ 8 ಲಕ್ಷ ರೂ.ಗಳನ್ನು ಆರ್ಥಿಕ ಸಹಾಯವಾಗಿ ನೀಡಲಾಗುತ್ತದೆ. ಡ್ರೋನ್ ಖರೀದಿಗೆ ಅಗತ್ಯವಿರುವ ಉಳಿದ ಹಣವನ್ನ ರಾಷ್ಟ್ರೀಯ ಕೃಷಿ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿ ಅಡಿಯಲ್ಲಿ ಶೇಕಡಾ 3ರ ಸಬ್ಸಿಡಿ ಬಡ್ಡಿದರದಲ್ಲಿ ಎರವಲು ಪಡೆಯಬಹುದು ಎಂದು ಕೇಂದ್ರ ತಿಳಿಸಿದೆ.
ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸುವುದು ಮತ್ತು ಬೇರೆಯವರ ಮೇಲೆ ಅವಲಂಬಿತರಾಗದಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ಕೃಷಿ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನವನ್ನ ಪರಿಚಯಿಸುವ ಆಶಯವನ್ನ ಸರ್ಕಾರ ಹೊಂದಿದೆ.
ಈ ವರ್ಷ ನಮೋ ಡ್ರೋನ್ ದೀದಿ ಯೋಜನೆಯಡಿ ವಿವಿಧ ರಾಜ್ಯಗಳ ಸುಮಾರು 3000 ಮಹಿಳಾ ಗುಂಪುಗಳಿಗೆ ಡ್ರೋನ್’ಗಳನ್ನ ಒದಗಿಸಲಾಗುವುದು. ಗರಿಷ್ಠ ಕೃಷಿಯೋಗ್ಯ ಭೂಮಿ, ಸಕ್ರಿಯ ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ನ್ಯಾನೊ ರಸಗೊಬ್ಬರಗಳ ಬಳಕೆಯನ್ನು ಆಧರಿಸಿ ಡ್ರೋನ್’ಗಳನ್ನ ಒದಗಿಸಲಾಗುವುದು.
ಪ್ರತಿ ಡ್ರೋನ್‌ನ ಬೆಲೆ ಸುಮಾರು 10 ಲಕ್ಷ ರೂ., ಅದರಲ್ಲಿ 8 ಲಕ್ಷ ಅಂದರೆ ಶೇ.80 ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ. ಉಳಿದ 2 ಲಕ್ಷಗಳನ್ನು ಮೂರು ಶೇಕಡಾ ಸಬ್ಸಿಡಿ ಬಡ್ಡಿಯಲ್ಲಿ ಸಾಲವಾಗಿ ನೀಡಲಾಗುತ್ತದೆ. ಈ ಹಣವನ್ನು ಮಾತ್ರ ಬ್ಯಾಂಕ್’ಗಳಿಗೆ ಮರುಪಾವತಿ ಮಾಡಬೇಕು.
BREAKING : ಡೆಪ್ಸಾಂಗ್’ನಲ್ಲಿ ಭಾರತೀಯ ಸೇನೆಯ ‘ಪರಿಶೀಲನಾ ಗಸ್ತು’ ಪ್ರಾರಂಭ : ‘MEA’ ದೃಢ
BREAKING : ಚನ್ನಪಟ್ಟಣ ಉಪಚುನಾವಣೆ : ಪ್ರಚಾರದ ವೇಳೆ ಬೈಕ್ ಮೇಲಿಂದ ಬಿದ್ದ ನಿಖಿಲ್ ಕುಮಾರಸ್ವಾಮಿ!