ಕೇಂದ್ರ ಸರ್ಕಾರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಇಲಾಖೆಯ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಕೊಪ್ಪಳ ಜಿಲ್ಲೆಯ 14 ಗ್ಯಾಸ್ ಏಜೆನ್ಸಿಗಳಿಂದ ಉಜ್ವಲ-3 ಅಡಿಯಲ್ಲಿ ಹೊಸ ಗ್ಯಾಸ್ ಸಂಪರ್ಕ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಫಲಾನುಭವಿಗಳು ಏಜೆನ್ಸಿಗಳಿಗೆ ನೇರವಾಗಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದಾಗಿದೆ.
ಅರ್ಹತೆಗಳು: ಈಗಾಗಲೇ ಗ್ಯಾಸ್ ಕನೆಕ್ಷನ್ ಹೊಂದಿರದ ವಯಸ್ಕ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕುಟುಂಬದ ಯಾವುದೇ ಸದಸ್ಯರು ಪ್ರತಿ ತಿಂಗಳಿಗೆ 10,000 ಆದಾಯ ಹೊಂದಿರಬಾರದು. ಕೃಷಿಯೇತರ ಚಟುವಟಿಕೆ ನಡೆಸಲು ವ್ಯಾಪಾರ ಅಥವಾ ವ್ಯವಹಾರ ಮಾಡುವ ಎಂಟರ್‌ಪ್ರೆöÊಸಸ್, ಸರ್ಕಾರದಲ್ಲಿ ನೋಂದಣಿಯಾಗಿರಬಾರದು. 2.5 ಎಕರೆ ನೀರಾವರಿ ಹಾಗೂ 7.5 ಎಕರೆ 1 ಬೆಳೆ ಬೆಳೆಯುವ ಭೂಮಿ ಹೊಂದಿರಬಾರದು. ಮನೆಯ ಸದಸ್ಯರು 3 ಮತ್ತು 4 ಚಕ್ರದ ಕೃಷಿ ವಾಹನ, ಟ್ರಾಕ್ಟರ್, 3 ಅಥವಾ 4 ಚಕ್ರದ ಮೀನುಗಾರಿಕೆ ದೋಣಿ ಹೊಂದಿರಬಾರದು. 5 ಎಕರೆ ಅದಕ್ಕಿಂತ ಹೆಚ್ಚು 2 ಬೆಳೆ ಬೆಳೆಯುವ ಕೃಷಿ ಜಮೀನು ಹೊಂದಿರಬಾರದು. “ಕಿಸಾನ್ ಕ್ರೆಡಿಟ್ ಕಾರ್ಡ್” ನಲ್ಲಿ 50,000 ಕ್ಕಿಂತ ಹೆಚ್ಚು ಸಾಲ ಹೊಂದಿರಬಾರದು. 30 ಚದರ ಅಡಿ ಸ್ಥಳದ ಮನೆ ಹೊಂದಿರಬಾರದು (ಸರ್ಕಾರದ ಯಾವುದೇ ಯೋಜನೆಯಲ್ಲಿ ಸೈಟ್ ಪಡೆದಿರಬಾರದು). ಸರ್ಕಾರಿ ನೌಕರ ಸದಸ್ಯರನ್ನು ಹೊಂದಿದ್ದಲ್ಲಿ ಆ ಕುಟುಂಬ ಅರ್ಹರಲ್ಲ. ಕುಟುಂಬದಲ್ಲಿ ಈಗಾಗಲೇ ಗ್ಯಾಸ್ ಸಂಪರ್ಕ ಹೊಂದಿರುವವರು ಸಹ ಅರ್ಹರಲ್ಲ.
ಕೆ.ವೈ.ಸಿ ಅರ್ಜಿ, ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಘೋಷಣಾ ಪ್ರಮಾಣ ಪತ್ರ, ಈ ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲೆಯಲ್ಲಿ ಹೊಸ ಗ್ಯಾಸ್ ಸಂಪರ್ಕಕ್ಕಾಗಿ ಅರ್ಹ ಮಹಿಳಾ ಫಲಾನುಭವಿಗಳು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಉಜ್ವಲ್ ಸಮಿತಿ (ಡಿವಿಸಿ) ಅಧ್ಯಕ್ಷರಾದ ಡಾ. ಸುರೇಶ ಬಿ. ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
ಬಿಪಿಎಲ್ ಕಾರ್ಡ್
ಆಧಾರ್ ಕಾರ್ಡ್
ವಯಸ್ಸಿನ ಪ್ರಮಾಣಪತ್ರ
ಮೊಬೈಲ್ ಸಂಖ್ಯೆ
ಪಾಸ್‌ಪೋರ್ಟ್ ಗಾತ್ರದ ಫೋಟೋ
ಬಿಪಿಎಲ್ ಪಟ್ಟಿಯಲ್ಲಿ ಹೆಸರಿನ ಮುದ್ರಣ
ಬ್ಯಾಂಕ್ ಪಾಸ್‌ಬುಕ್‌ನ ಫೋಟೋ ಪ್ರತಿ
ಪಡಿತರ ಚೀಟಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭವನ್ನು ಮಹಿಳೆಯರು ಮಾತ್ರ ಪಡೆಯಬಹುದು. ಪುರುಷರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ನೀವು ಈಗಾಗಲೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿದ್ದರೆ, ನಿಮಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.








