ಸುಭಾಷಿತ :

Tuesday, January 28 , 2020 2:10 PM

ವಾಟ್ಸ್ ಆಪ್ ಬಳಕೆದಾರರೇ ಗಮನಿಸಿ : ಇನ್ಮುಂದೆ ‘ಅನುಮತಿ ಇಲ್ಲದೇ’ ಯಾರನ್ನೂ ಗ್ರೂಪ್ ಗೆ ಸೇರಿಸೋಕೆ ಆಗೋಲ್ಲ


Thursday, November 7th, 2019 8:03 pm

ಸ್ಪೆಷಲ್ ಡೆಸ್ಕ್ : ಇದುವರೆಗೆ ಯಾರು ಬೇಕಾದ್ರೂ ವಾಟ್ಸ್ ಅಪ್ ನಲ್ಲಿ ಗ್ರೂಪ್ ಕ್ರಿಯೇಟ್ ಮಾಡಿ, ಯಾರನ್ನು ಬೇಕಾದ್ರೂ ಪಟ್ ಪಟ್ ಅಂತ ಸೇರ್ಪಡೆ ಮಾಡಬಹುದಾಗಿತ್ತು. ಆದ್ರೇ ಇನ್ಮುಂದೆ ಹೀಗೆ ಮಾಡೋಕೆ ಸಾಧ್ಯವಿಲ್ಲ. ಕಾರಣ ಇನ್ನೂ ಯಾರಾದ್ರೂ ಗ್ರೂಪ್ ಕ್ರಿಯೆಟ್ ಮಾಡಿ ಗ್ರೂಪ್ ಗೆ ಸೇರ್ಪಡೆ ಮಾಡಬೇಕು ಅವರ ನಂಬರ್ ಅಂದ್ರೇ, ಅವರ ಅನುಮತಿ ಕಡ್ಡಾಯವಾಗಿದೆ.

ಹೌದು… ಈ ಮೊದಲು ಯಾರಾದ್ರೂ ಗ್ರೂಪ್ ಕ್ರಿಯೇಟ್ ಮಾಡಿದ್ರೂ ಅಂದ್ರೇ ಸಾಕೂ, ಯಾರ ನಂಬರ್ ಬೇಕಾದ್ರೂ ಪಟ್ ಪಟ್ ಅಂತ ಗ್ರೂಪ್ ಗೆ ಸೇರಿಸಬಹುದಾಗಿತ್ತು. ಈ ಮೂಲಕ ತಮಗೆ ಬೇಕು, ಬೇಡದೇ ಇರುವಂತ ಯಾವುದೇ ಗ್ರೂಪ್ ನಲ್ಲಿ ಬೇಕಾದ್ರೂ ನಮ್ಮ-ನಿಮ್ಮ ನಂಬರ್ ಸೇರ್ಪಡೆ ಮಾಡಬಹುದಾಗಿತ್ತು. ಆದ್ರೇ ಇದೀಗ ಇಂತಹ ಯಾರೋ ಕ್ರಿಯೆಟ್ ಮಾಡೋ ಮತ್ತಾರೋ ಸೇರಿರುವ, ತಮಗೆ ಅಗತ್ಯವಿಲ್ಲದ ಗ್ರೂಪ್ ಗೆ ನಮ್ಮ-ನಿಮ್ಮ ನಂಬರ್ ಸೇರಿಸಲು ಸಾಧ್ಯವಿಲ್ಲ.

ಇಂತಹ ಹೊಸ ಫ್ರೀಚರ್ ಅನ್ನು ವಾಟ್ಸ್ ಅಪ್ ಪರಿಚಯಿಸಿದ್ದು, ಇದರ ಅನುಸಾರ ವಾಟ್ಸ್ ಅಪ್ ನಲ್ಲಿ ಗ್ರೂಪ್ ಕ್ರಿಯೇಟ್ ಯಾರೇ ಮಾಡಿದ್ರೂ, ಯಾರ ನಂಬರ್ ಸೇರಿಸೋದಕ್ಕೇ ಹೋದ್ರೂ ಅವರ ಅನುಮತಿ ಕಡ್ಡಾಯವಾಗಿದೆ. ಇಂತಹ ಕಿರಿಕಿರಿಯಿಂದ ವಿಮುಕ್ತಿಯನ್ನು ಇದೀಗ ವಾಟ್ಸ್ ಅಪ್ ನೀಡಿದ್ದು, ನೀವು ಪ್ರೈವೆಸಿಯಲ್ಲಿ ಎವರಿ ಒನ್, ಮೈ ಕಾಂಟ್ಯಾಕ್ಸ್ ಅಥವಾ ಮೈ ಕಾಂಟ್ಯಾಕ್ಟ್ ಎಕ್ಸೆಪ್ಟ್ ಆಯ್ಕೆಗಳನ್ನು ಮಾಡಿಕೊಂಡ್ರೇ, ಮುಗೀತು ಅಷ್ಟೇ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions