ಬೆಂಗಳೂರು: ರಾಜ್ಯದ ಗ್ರಾಮ ಆಡಳಿತಾಧಿಕಾರಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯ ಸರ್ಕಾರದಿದಂ ಉಚಿತ ಲ್ಯಾಪ್ ಟಾಪ್ ವಿತರಣೆಯನ್ನು ಮಾಡಲಾಯಿತು. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ 4000 ಸಾವಿರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ನಲ್ಲಿ ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ, ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ನಿಟ್ಟಿನಲ್ಲಿ 4,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣಾ ಹಾಗೂ ಕಂದಾಯ ಇಲಾಖೆಯ ಎರಡು ವರ್ಷದ ʼಸಾಧನೆಯ ಹಾದಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಾಲ್ಕು ಸಾವಿರ ಜನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ (ಕ್ರೋಮ್ ಬುಕ್) ವಿತರಿಸಲಾಯಿತು.
ಈ ಬಗ್ಗೆ ಮಾತನಾಡಿದ ಅವರು, “ದಿನ ಬೆಳಗಾದರೆ ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿಗಳಿಗೆ ಟಪಾಲು ಕೊಡೋದು ತಗೋಳೋದೆ ಅವರಿಗೆ ಕೆಲಸವಾಗಿದೆ. ಕೆಲಸ ಮಾಡೋದು ಬಿಟ್ಟು ಓಡಾಡೋದರಲ್ಲೇ ಸಮಯ ವ್ಯರ್ಥವಾಗುತ್ತಿದೆ. ಈ ಟಪಾಲು ವ್ಯವಸ್ಥೆ 200 ವರ್ಷಗಳಷ್ಟು ಹಳೆಯದು. ಈ ವ್ಯವಸ್ಥೆಗೆ ಏನಾದ್ರೂ ಅರ್ಥ ಇದೆಯಾ? ಇದು ಎಷ್ಟಯ ಅನಗತ್ಯ ಹೊರೆ. ಈ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟ್ಯಾಪ್” ನೀಡಲಾಗುತ್ತಿದೆ.
ಟಪಾಲು ವ್ಯವಸ್ಥೆಯಿಂದ ಕೆಲಸ ಸಾಕಷ್ಟು ವಿಳಂಭವಾಗುತ್ತಿದೆ. ಪರಿಣಾಮ ಅರ್ಜಿ ನೀಡಿದ ಜನ ಆಕಾಶ ಭೂಮಿ ನೋಡುವಂತಾಗಿದೆ. ಅಧಿಕಾರಿಗಳು ಕೆಲಸ ಮಾಡಿಲ್ಲ ಅಂದ್ರೆ ಕಚೇರಿಗೆ ಅಲೆಯುವ ಜನರಿಗೂ ಸಂಕಷ್ಟ. ಎಲ್ಲದಕ್ಕೂ ಸಂಪೂರ್ಣ ವಿರಾಮ ಹಾಕುವ ಉದ್ದೇಶದಿಂದ ಎಲ್ಲಾ ಕೆಲಸವೂ ಸಂಪೂರ್ಣ ಡಿಜಿಟಲೀಕರಣಗೊಳಿಸಬೇಕು ಎಂದು ವಿಎ ಯಿಂದ ಸಚಿವರ ವರೆಗೆ ಎಲ್ಲಾ ಫೈಲು ದಾಖಲೆ ಡಿಜಿಟಲ್ ರೂಪದಲ್ಲೇ ಕೆಲಸ ಆಗಬೇಕು ಎಂದು ನಿರ್ಧಾರ ಮಾಡಿದ್ದೇವೆ.
ನಾವು 4000 ಲ್ಯಾಪ್ಟ್ಯಾಪ್ ಕೇಳಿದ್ದೆವು. ಆದರೆ, ಕ್ಯಾಬಿನೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ನವರು 6,000 ಲ್ಯಾಪ್ಟಾಪ್ ಗಳಿಗೆ ಅನುಮೋದನೆ ನೀಡಿದ್ದಾರೆ. 20025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ವಿಎ ಗಳಿಗೆ ಲ್ಯಾಪ್ಟಾಪ್ ನೀಡಲಾಗುವುದು. ಎಲ್ಲಾ ಕಡತ ವಿಲೇವಾರಿಯನ್ನೂ ಆನ್ಲೈನ್ಗೆ ತಂದು ಪಾರದರ್ಶಕವಾಗಿ ಕೆಲಸ ಆಗುವಂತೆ ಹಾಗೂ ಕೆಲಸದ ವಿಳಂಭ ಸೇರಿದಂತೆ ದಾಖಲೆಗಳು ಕಳೆದುಹೋಗದಂತೆ ನೋಡಿಕೊಳ್ಳುವುದು ಡಿಜಿಟಲೀಕರಣದ ಉದ್ದೇಶ ಎಂದರು.