ಬೆಂಗಳೂರು: ರಾಜ್ಯದ ಉರ್ದು ಶಾಲೆಯ ಮಕ್ಕಳಿಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ಪ್ರತಿ ಶುಕ್ರವಾರ ಬ್ಯಾಗ್ ರಹಿತ ದಿನ ಆಚರಣೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಕುರಿತಂತೆ ಡಿಎಸ್ಇಆರ್ ಟಿಯ ನಿರ್ದೇಶಕಿ ವಿ.ಸುಮಂಗಲಾ ಅವರು ನಿರ್ದೇಶನ ನೀಡಿದ್ದಾರೆ. ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆ ನೀಡುವ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಮಕ್ಕಳ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಉರ್ದು ಶಾಲೆಗಳು ಶುಕ್ರವಾರ ಅರ್ಧ ದಿನ ಮತ್ತು ಶನಿವಾರ ಪೂರ್ಣ ದಿನ ಶಾಲೆ ನಡೆಯುತ್ತಿರುವ ಕಾರಣ ʼಸಂಭ್ರಮ ಶನಿವಾರʼ ಆಚರಣೆಯನ್ನು ಶುಕ್ರವಾರ ಅಥವಾ ಶನಿವಾರ ಆಚರಿಸುವ ಕುರಿತು ಹಲವು ಶಾಲೆಗಳು ಮಾರ್ಗದರ್ಶನ ನೀಡುವಂತೆ ಕೋರಿದ್ದವು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉರ್ದು ಶಾಲೆಗಳಲ್ಲಿ ಶನಿವಾರ ಪೂರ್ಣ ದಿನವಾಗಿದ್ದು, ಶುಕ್ರವಾರ ಅರ್ಧ ದಿನ ಶಾಲೆ ನಡೆಯುವುದರಿಂದ ʼಶುಕ್ರವಾರ ಬ್ಯಾಗ್ ರಹಿತʼ ದಿನವನ್ನಾಗಿ ಆಚರಿಸಲು ಕ್ರಮವಹಿಸುವಂತೆ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ.ಸುಮಂಗಲಾ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಶುಕ್ರವಾರದಂದು ಮಕ್ಕಳ ಹಲವು ಚಟುವಟಿಕೆಗಳ ಆಯೋಜನೆ ಮಾಡಲಾಗುತ್ತದೆ. ಅಂದು ಘನತ್ಯಾಜ್ಯ ನಿರ್ವಹಣೆ, ಸುರಕ್ಷಿತ ತಂತ್ರಜ್ಞಾನ ಬಳಕೆ, ಸಾರ್ವಜನಿಕ ಸೌಕರ್ಯದ ಬಗ್ಗೆ ಅರಿವು, ರಸ್ತೆ ಸುರಕ್ಷತೆ, ಸ್ವಾಸ್ಥ್ಯ ಮತ್ತು ಶುಚಿತ್ವ, ಮಾದಕ ವಸ್ತುಗಳ ಬಗ್ಗೆ ಜಾಗೃತಿ, ಲಿಂಗ ಸಮಾನತೆ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡಲಾಗುತ್ತದೆ.
‘ಖಾಯಂ ನಿರೀಕ್ಷೆ’ಯಲ್ಲಿದ್ದ ‘ಅತಿಥಿ ಉಪನ್ಯಾಸಕ’ರಿಗೆ ಬಿಗ್ ಶಾಕ್: ‘ಸೇವೆ ಖಾಯಂ’ ಇಲ್ಲ – ‘ರಾಜ್ಯ ಸರ್ಕಾರ’ ಸ್ಪಷ್ಟನೆ
ನೀರಾವರಿ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್