ಬೆಂಗಳೂರು: ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಹಳೇ ಕೆ ಎಸ್ ಆರ್ ಟಿಸಿ ಬಸ್ಸುಗಳಿಗೆ ನಿಗಮದಿಂದ ಹೊಸ ರೂಪ ನೀಡಲಾಗುತ್ತಿದೆ. 1027 ಬಸ್ಸುಗಳನ್ನು ನವೀಕರಿಸಲಾಗುತ್ತಿದ್ದು, ಹೊಸ ಮಾದರಿಯ ಬಸ್ಸುಗಳ ರೂಪದಲ್ಲಿ ರಸ್ತೆಗೆ ಶೀಘ್ರದಲ್ಲೇ ಇಳಿಯಲಿದ್ದಾವೆ.
ಹೌದು. ಕೆಎಸ್‌ಆರ್‌ಟಿಸಿಯ ಹಳೇ ಸಾರಿಗೆ ಬಸ್‌ಗಳನ್ನು ನವೀಕರಿಸಿ ಮತ್ತೆ ಬಳಸುವ ಯೋಜನೆಯಡಿ ನವೀಕೃತ ಬಸ್‌ಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಇಲ್ಲಿಯವರೆಗೆ 1,027 ಬಸ್‌ಗಳನ್ನು ನವೀಕರಿಸಲಾಗಿದೆ.
ಈ ಮೊದಲು 10 ಲಕ್ಷ ಕಿ.ಮೀ ಸಂಚಾರ ಮಾಡಿದ ಬಸ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿತ್ತು. ಇದೀಗ ಈ ಬಸ್‌ಗಳು ಹೊಸ ಯೋಜನೆಯಿಂದಾಗಿ ನವೀಕರಣಗೊಂಡು ಮತ್ತೆ 3 ಲಕ್ಷ ಕಿ.ಮೀ ಸಂಚರಿಸಲಿವೆ.
ಒಂದು ಸಾರಿಗೆ ಬಸ್ ಖರೀದಿಗೆ ಕನಿಷ್ಠ ರೂ. 40 ಲಕ್ಷ ಬೇಕಾಗುತ್ತದೆ. ಒಂದು ಬಸ್ ನವೀಕರಿಸಲು ರೂ. 3 ಲಕ್ಷದಿಂದ ರೂ. 4 ಲಕ್ಷ ಬೇಕಾಗುತ್ತದೆ. ಒಂದು ಹೊಸ ಬಸ್ ಖರೀದಿ ಮಾಡುವ ವೆಚ್ಚದಲ್ಲಿ 10 ಬಸ್‌ಗಳನ್ನು ನವೀಕರಿಸಲು ಸಾಧ್ಯವಾಗುತ್ತದೆ.ಇದರಿಂದಾಗಿ ಬಸ್‌ಗಳ ಬೇಡಿಕೆಯನ್ನು ಪೂರೈಸಲು ಸಹಾಯಕವಾಗುತ್ತದೆ.
BREAKING: ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ ‘ಸದಾನಂದ ಸುವರ್ಣ’ ವಿಧಿವಶ: ಸಿಎಂ ಸಿದ್ಧರಾಮಯ್ಯ ಸಂತಾಪ
BIG UPDATE : ಕಾರವಾರದಲ್ಲಿ ಗುಡ್ಡ ಕುಸಿತದಿಂದ 9 ಜನರ ದುರ್ಮರಣ : 7 ಜನರ ಸಾವು, ಇಬ್ಬರು ನಾಪತ್ತೆ!