ಬೆಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಸಂಚರಿಸುವಂತ ಪ್ರಯಾಣಿಕರಿಗೆ ಕೆಲವೊಂದು ಬಸ್ಸುಗಳಲ್ಲಿ ಟಿಕೆಟ್ ದರದಲ್ಲಿ ರೌಂಡಪ್ ಎನ್ನುವ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿರುವಂತ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಸಾರಿಗೆ ನಿಗಮವು ರೌಂಡಪ್ ವ್ಯವಸ್ಥೆಯನ್ನು ರದ್ದುಗೊಳಿಸುವಂತ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಆದೇಶ ಹೊರಡಿಸಿದ್ದು, ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 774/2016 ದಿನಾಂಕ 03-03-2016 ರಲ್ಲಿ ಪ್ರತಿಷ್ಠಿತ ಸಾರಿಗೆಗೆ ಅವತಾರ್ ಕೌಂಟರ್‌ಗಳಲ್ಲಿ ಮತ್ತು ಇಟಿಎಂ ಯಂತ್ರಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಪ್ರಯಾಣದರವನ್ನು ರೌಂಡ್ ಆಫ್ (Round-off) ಮಾಡಲು ಆದೇಶಿಸಲಾಗಿದೆ ಎಂದಿದೆ.
ಪ್ರಸ್ತುತ, ಸಾರ್ವಜನಿಕ ಪ್ರಯಾಣಿಕರು ಟಿಕೇಟ್ ಕಾಯ್ದಿರಿಸಲು ಕೌಂಟರ್‌ಗಳಲ್ಲಿ POS ಯಂತ್ರಗಳನ್ನು ಹಾಗೂ ಇಟಿಎಂ ಯಂತ್ರಗಳಲ್ಲಿ UPI ವ್ಯವಸ್ಥೆ ಒದಗಿಸಿರುವುದರಿಂದ ಪ್ರಯಾಣದರವನ್ನು ರೌಂಡ್ ಆಫ್ (Round-off) ಮಾಡುವ ಅವಶ್ಯಕತೆಯಿಲ್ಲದಿರುವುದರಿಂದ, ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 774/2016 ದಿನಾಂಕ 03-03-2016 ನ್ನು ಹಿಂಪಡೆಯಲಾಗಿದೆ ಎಂಬುದಾಗಿ ತಿಳಿಸಿದೆ.
ಉಲ್ಲೇಖ-01 ರಲ್ಲಿನ ಸಾಮಾನ್ಯ ಸ್ಥಾಯಿ ಆದೇಶವನ್ನು ಈ ಕೂಡಲೇ ಜಾರಿಗೆ ಬರುವಂತೆ ಅನೂರ್ಜಿತಗೊಳಿಸಲಾಗಿದೆ. ಈ ಆದೇಶವನ್ನು ಜಾರಿಗೊಳಿಸಿದ ಬಗ್ಗೆ ಅನುಸರಣಾ ವರದಿ ಕಳುಹಿಸುವುದು ಎಂದಿದೆ.
ಹಸಿರುಮಕ್ಕಿ ಸೇತುವೆ ಬೇಗ ಆಗಬಾರದೆಂದು ಬಿವೈ ರಾಘವೇಂದ್ರ, ಹಾಲಪ್ಪ ತಡೆ: ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ
BREAKING: CUET UG 2025 ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ | CUET UG Result 2025