ಬೆಂಗಳೂರು: ಜೋಗ್ ಫಾಲ್ಸ್ ಗೆ ತೆರಳುವಂತ ಪ್ರವಾಸಿಗರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿಯಿಂದ ಪ್ಯಾಕೇಜ್ ಟೂರ್ ಘೋಷಣೆ ಮಾಡಲಾಗಿದೆ. ಈ ಮೂಲಕ ಜೋಗದ ಜಲಪಾತ ವೀಕ್ಷಣೆಗೆ ತೆರಳುವಂತ ಪ್ರವಾಸಿಗರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಸ್ ಆರ್ ಟಿಸಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಜೋಗ ಜಲಪಾತ” ವಯಾ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಪ್ಯಾಕೇಜ್‌ಟೂರ್‌ನ್ನು ದಿನಾಂಕ 19/07/2024 ರಿಂದ ಪ್ರಾರಂಭಿಸಿ ಈ ಕೆಳಕಂಡ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುತ್ತದೆ.
ಬೆಂಗಳೂರು-ಜೋಗ ಜಲಪಾತ ಪ್ಯಾಕೇಜ್ ಟೂರ್ ವೇಳಾಪಟ್ಟಿ
ಬೆಂಗಳೂರಿನಿಂದ ಸಾಗರ 2230-0530
ಹೋಟೆಲ್‌ನಲ್ಲಿ ಫ್ರೆಶ್ ಅಪ್ ಹಾಗೂ ವಿಶ್ರಾಂತಿ ಸಮಯ 0530-0700
ಉಪಹಾರ 0700-0715
ಸಾಗರದಿಂದ-ವರದಹಳ್ಳಿ 0715-0730
ವರದಹಳ್ಳಿಯಿಂದ ವರದಮೂಲ 0830-0900
ವರದಮೂಲದಿಂದ ಇಕ್ಕೇರಿ 0915-0930
ಇಕ್ಕೇರಿಯಿಂದ ಕೆಳದಿ 1030-1100
ಕೆಳದಿಯಿಂದ ಸಾಗರ 1200-1230
ಮಧ್ಯಾಹ್ನದ ಊಟ 1245-1315
ಸಾಗರದಿಂದ ಜೋಗ 1330-1415
ಜೋಗದಿಂದ ಸಾಗರ 1815-1900
ಶಾಪಿಂಗ್ ಸಮಯ 1900-2000
ರಾತ್ರಿ ಊಟ 2030-2045
ಸಾಗರದಿಂದ ಬೆಂಗಳೂರು 2200-0500
ಬೆಂಗಳೂರು-ಜೋಗ ಜಲಪಾತ ಪ್ಯಾಕೇಜ್ ಟೂರ್ ಸಾರಿಗೆಯ ಪ್ರಯಾಣದರದ ವಿವರಗಳು
ಪ್ರಯಾಣಿಕರು ವಾರಾಂತ್ಯ ದಿನ (ಶುಕ್ರವಾರ ಹಾಗೂ ಶನಿವಾರ ಹೊರಡುವ ಸಾರಿಗೆಗಳಿಗೆ) ವಯಸ್ಕ ರೂ.3000-00, ಮಕ್ಕಳಿಗೆ (6 ರಿಂದ 12 ವರ್ಷ) ರೂ.2800-00 ಆಗಿರುತ್ತದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಹಾಸನದಲ್ಲಿ ಶಂಕಿತ ಡೆಂಗ್ಯೂಗೆ ಮತ್ತೊಂದು ಬಲಿ: 9 ವರ್ಷದ ಬಾಲಕ ಸಾವು | Dengue Case
HD ಕುಮಾರಸ್ವಾಮಿ ಸರ್ವಪಕ್ಷ ಸಭೆಗೆ ಬರದೇ ‘ಬಾಡೂಟಕ್ಕೆ’ ಹೋಗಿದ್ದು ದುರಂತ : ಸಚಿವ ಚೆಲುವರಾಯಸ್ವಾಮಿ