ದಾವಣಗೆರೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರತಿ ವರ್ಷದಂತೆ ಪ್ರಸಕ್ತ ವರ್ಷದಲ್ಲಿಯೂ ಆಗಸ್ಟ್ 3 ರಿಂದ ಪ್ರತಿ ಶನಿವಾರ, ಭಾನುವಾರ ರಜಾದಿನಗಳಂದು ದಾವಣಗೆರೆ ಹಾಗೂ ಹರಿಹರದಿಂದ ವಿಶ್ವವಿಖ್ಯಾತ ಪ್ರೇಕ್ಷಣೀಯ ಸ್ಥಳವಾದ ಶಿರಸಿ, ಜೋಗಫಾಲ್ಸ್ ವಿಕ್ಷಣೆಗೆ ವಿಶೇಷ ಪ್ಯಾಕೇಜ್‌ನೊಂದಿಗೆ ರಾಜಹಂಸ ಹಾಗೂ ವೇಗದೂತ (ಅಶ್ವಮೇದ) ಸಾರಿಗೆಯನ್ನು ಕಾರ್ಯಚರಣೆಗೆ ಬಿಡಲಾಗುತ್ತಿದೆ.
ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಬುಕ್ಕಿಂಗ್ ಮಾಡಲು ಸೌಕರ್ಯ ಕಲ್ಪಿಸಲಾಗಿದೆ. ಅಥವಾ ಆನ್‌ಲೈನ್ ಬುಕ್ಕಿಂಗ್‌ಗಾಗಿ ನಿಗಮದ ವೆಬ್‌ಸೈಟ್ ksrtc.karnataka.gov.in ನಲ್ಲಿ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಕರಾದ ಸಿದ್ದೇಶ್ ಎನ್.ಹೆಬ್ಬಾಳ್ ತಿಳಿಸಿದ್ದಾರೆ.