ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ತೆರಳುವಂತ ಪ್ರವಾಸಿಗರಿಗೆ ಅನುಕೂಲಕ್ಕಾಗಿ, ನೈರುತ್ಯ ರೈಲ್ವೆಯಿಂದ, ದಸರಾ ಹಬ್ಬದ ಪ್ರಯುಕ್ತ ನಾಲ್ಕು ರೈಲುಗಳ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ ಮಾಡಿದೆ.
ರೈಲು ಸಂಖ್ಯೆ 16225/16226 ಮೈಸೂರು-ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 16222/16221 ಮೈಸೂರು-ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್ಪ್ರೆಸ್ ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ತಾತ್ಕಾಲಿಕ ನಿಲುಗಡೆಗಳು ಅಕ್ಟೋಬರ್ 9 ರಿಂದ 13, 2024 ರವರೆಗೆ ಜಾರಿಯಲ್ಲಿರುತ್ತವೆ.
ತಾತ್ಕಾಲಿಕ ನಿಲುಗಡೆಗಳ ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ಪ್ರೆಸ್ ರೈಲು ಬೆಳಗುಲ (10:27/10:28 ಗಂಟೆ), ಕೃಷ್ಣರಾಜಸಾಗರ (10:31/10:32 ಗಂಟೆ), ಕಲ್ಲೂರು ಯಡಹಳ್ಳಿ (10:36/10:37 ಗಂಟೆ), ಸಾಗರಕಟ್ಟೆ (10:41/10:37 ಗಂಟೆ), ಸಾಗರಕಟ್ಟೆ (10:41/10:42) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಗಳನ್ನು ಹೊಂದಿರುತ್ತದೆ.
ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ಪ್ರೆಸ್ ರೈಲು ಮಾವಿನಕೆರೆ (14:27/14:28 ಗಂಟೆ), ಹೊಸ ಅಗ್ರಹಾರ (15:25/15:26 ಗಂಟೆ), ಅರ್ಜುನಹಳ್ಳಿ (15:31/15:32 ಗಂಟೆ), ಹಂಪಾಪುರ (15:31/15:32 ಗಂಟೆ), ಹಂಪಾಪುರ (15:37/15:32 ಗಂಟೆ) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಗಳನ್ನು ಹೊಂದಿರುತ್ತದೆ.
ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ಪ್ರೆಸ್ ರೈಲು ಕೃಷ್ಣರಾಜಸಾಗರ (14:17/14:18 ಗಂಟೆ), ಕಲ್ಲೂರು ಯಡಹಳ್ಳಿ (14:24/14:25 ಗಂಟೆ), ದೋರ್ನಹಳ್ಳಿ (14:35/14:36 ಗಂಟೆ), ಹಂಪಾಪುರ (14:49/14:5) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಗಳನ್ನು ಹೊಂದಿರುತ್ತದೆ.
ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್ಪ್ರೆಸ್ ರೈಲು ಅರ್ಜುನಹಳ್ಳಿ (14:03/14:04 ಗಂಟೆ), ಹಂಪಾಪುರ (14:09/14:10 ಗಂಟೆ), ದೋರ್ನಹಳ್ಳಿ (14:20/14:21 ಗಂಟೆ), ಕಲ್ಲೂರು ಯಡಹಳ್ಳಿ (14:20/14:21 ಗಂಟೆ), ಕಲ್ಲೂರು ಯಡಹಳ್ಳಿ (14:36/14:3) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಗಳನ್ನು ಹೊಂದಿರುತ್ತದೆ.
ಶಿವಮೊಗ್ಗ: ಅ.2ರಂದು ಮಹಾಲಯ ಅಮವಾಸ್ಯೆ ಪ್ರಯುಕ್ತ ‘ಮಾಂಸ ಮಾರಾಟ’ ನಿಷೇಧ
BREAKING : ತಿರುಪತಿ ಲಡ್ಡು ವಿವಾದ : ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್! | Tirupati Laddu Row