ಬೆಂಗಳೂರು: ಇ-ಖಾತಾ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದ್ದು, ಸದನದಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆತಿದ್ದೇ ಆದರೇ ಗ್ರಾಮೀಣ ಭಾಗದ ಸಮಸ್ಯೆಯೇ ತೀರಿದಂತೆ ಆಗಲಿದೆ.
ರಾಜ್ಯದ ಅಕ್ರಮ ನಿವೇಶನ, ಮನೆಗಳಿಗೆ ಇ-ಖಾತಾ ನೀಡುವ ಸಂಬಂಧ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಈ ತಿದ್ದುಪಡಿ ಮಸೂದೆಯನ್ನು ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್ ಸರ್ಕಾರ ಮಂಡಿಸಲಿದೆ.
ಅಕ್ರಮ ಮನೆ, ನಿವೇಶನಗಗಳಿಗೆ ಸಕ್ರಮ ಮಾಡುವ ಸಂಬಂಧದ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆತಿದ್ದೇ ಆದರೇ, ಗ್ರಾಮೀಣ ಹಾಗೂ ನಗರ ಭಾಗದ ಅಕ್ರಮ ನಿವೇಶನ, ಮನೆ ಮಾಲೀಕರಿಗೆ ಸಿಹಿಸುದ್ದಿ ಸಿಗಲಿದೆ.
ಗ್ರಾಮೀಣ ಭಾಗದ ಕಂದಾಯ ಬಡಾವಣೆ, ಗ್ರಾಮ ಠಾಣೆ ವ್ಯಾಪ್ತಿಯ ಮನೆ, ನಿವೇಶನ ಸಕ್ರಮಕ್ಕೆ ಅವಕಾಶ ದೊರೆಯುವಂತಾಗಲಿದ್ದು, ಇ-ಖಾತಾ ಲಭ್ಯವಾಗಲಿದೆ.
BREAKING NEWS: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನೆ ಪ್ರಮಾಣ ವಚನ ಸ್ವೀಕಾರ | Mark Carney Sworn
BREAKING: ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕ, ಐಸಿಸ್ ನಾಯಕ ಅಬು ಖದೀಜಾ ಹತ್ಯೆ | ISIS leader Abu Khadija