ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್, ಬೆಂಗಳೂರು ಇಲ್ಲಿ ಯುಹೆಚ್ಕ್ಯೂ ಕೋಟಾದಡಿ ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್ ನೇಮಕಾತಿ ನಡೆಯಲಿದೆ.
17 1/2 ವರ್ಷದಿಂದ 21 ವರ್ಷದೊಳಗಿನ (2004 ರ ಅಕ್ಟೋಬರ್ 01 ರಿಂದ 2008 ರ ಏಪ್ರಿಲ್ 01 ರ ನಡುವೆ ಜನಿಸಿರುವ) ಮಾಜಿ ಸೈನಿಕರ ಮಕ್ಕಳು ಮತ್ತು ಅವರ ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್(ಜನರಲ್ ಡ್ಯೂಟಿ, ಟೆಕ್ನಿಕಲ್), ಅಗ್ನಿವೀರ್(ಟ್ರೇಡ್ಸ್ಮನ್ 8ನೇ ಮತ್ತು 10 ನೇ ತರಗತಿ ಪಾಸ್) ಹಾಗೂ ಅಗ್ನಿವೀರ್ ಸ್ಪೋರ್ಟ್ಸ್ಮೆನ್(ಓಪೆನ್ ಕೆಟಗರಿ) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮದ್ರಾಸ್ ಗ್ರೂಪ್ ಇಂಜಿನಿಯರಿAಗ್ ಮತ್ತು ಸೆಂಟರ್, ಬೆಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು(ಪ್ರ) ಇವರು ಪ್ರಕಟಣೆಯಲ್ಲಿ ತಿಳಿದ್ದಾರೆ.