ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷಏತ್ರಗಳ ಯಾತ್ರೆಗೆ ತೆರಳೋರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇನೆಂದರೇ ಇದಕ್ಕೆ ತಗಲುವಂತ ಮೊತ್ತದಲ್ಲಿ ಸರ್ಕಾರವೇ 15,000 ಪಾವತಿಸಲಿದೆ.
ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂ ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಪ್ರವಾಸ ಇದಾಗಿದೆ.
ಈ ಪ್ಯಾಕೇಜ್‌ಗೆ ಒಟ್ಟು ₹25,000 ತಗುಲಲಿದ್ದು, ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ ₹10,000 ಭರಿಸಲಾಗುತ್ತದೆ. ಹಾಗೂ ಸಹಾಯಧನ ₹5,000 ಒಳಗೊಂಡಿರುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ ₹10,000 ಮಾತ್ರ ಪಾವತಿಸಬೇಕಾಗುತ್ತದೆ.
ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. 3 ಟೈರ್ ಎ.ಸಿ. ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಇರುತ್ತದೆ.
ಟಿಕೆಟ್ ಬುಕ್ಕಿಂಗ್‌ಗಾಗಿ irctctourism.com/Karnatakbgaura ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ 9003140710, 8595931292, 8595931294, 9731641611,8595931293, 8595931291 ಗೆ ಕರೆ ಮಾಡಬಹುದು.
ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂ ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಪ್ರವಾಸ ಇದಾಗಿದೆ.
ಈ ಪ್ಯಾಕೇಜ್‌ಗೆ ಒಟ್ಟು ₹25,000 ತಗುಲಲಿದ್ದು, ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ ₹10,000 ಭರಿಸಲಾಗುತ್ತದೆ.… pic.twitter.com/fSOnucqz2j
— DIPR Karnataka (@KarnatakaVarthe) October 15, 2024
ಖ್ಯಾತ ಸ್ವೀಡನ್ ಫುಟ್ಬಾಲ್ ತಾರೆ ಕೈಲಿಯನ್ ಎಂಬಪೆ ವಿರುದ್ಧ ಅತ್ಯಾಚಾರ ಆರೋಪ: ವರದಿ | Kylian Mbappe
ಬೆಂಗಳೂರು ಜನತೆ ಗಮನಕ್ಕೆ: ಮಳೆ ಅವಾಂತರ ಸಂಬಂಧಿತ ದೂರುಗಳಿಗಾಗಿ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ