ಕೆಎನ್ಎನ್ ಸ್ಪೆಷಲ್ ಡೆಸ್ಕ್: ಮಲೆನಾಡಿನ ಸೊಬಸು ಸವಿಯೋದಕ್ಕೆ ಬಹುತೇಕರು ಇಷ್ಟ ಪಡುತ್ತಾರೆ. ಈ ಸೊಬಗಿನ ಸಿರಿಯಲ್ಲಿ ಹೊಸ ವರ್ಷ ಆಚರಣೆ ಇನ್ನೂ ಮನಮೋಹಕ. ಅಷ್ಟೇ ಅಚ್ಚಳಿಯದೇ ಉಳಿಯುವ ನೆನಪು ಕೂಡ. ಹೀಗೆ ಮಲೆನಾಡಲ್ಲಿ ಹೊಸ ವರ್ಷಾಚರಣೆ ಮಾಡುವ ಆಸೆ ಇದ್ದರೇ.. ನಿಮಗೆ ಅವಕಾಶವೊಂದಿದೆ. ಅದು ಎಲ್ಲಿ.? ಏನೆಲ್ಲಾ ಇರುತ್ತೆ ಎನ್ನುವ ಮಾಹಿತಿ ಮುಂದೆ ಓದಿ.
ಸದ್ಗುರು ಗ್ರೂಪ್ಸ್ ವತಿಯಿಂದ ಸಂಗೀತ ಕಾರ್ಯಕ್ರಮ
ಸದ್ಗುರು ಗ್ರೂಪ್ಸ್ ವತಿಯಿಂದ ಸಾಗರದಲ್ಲಿ ಮೊದಲ ಬಾರಿಗೆ ಅತಿದೊಡ್ಡ ಸಂಗೀತ ಕಾರ್ಯಕ್ರಮವನ್ನು ಹೊಸ ವರ್ಷಾಚರಣೆಗೆ ಆಯೋಜಿಸಲಾಗುತ್ತಿದೆ. ಪ್ರಸಿದ್ಧ ಸಿಂಗರ್ ಗಳ ಮ್ಯೂಸಿಕಲ್ ನೈಟ್ಸ್ ನಿಮ್ಮ ಹೊಸ ವರ್ಷಾಚರಣೆಗೆ ಮತ್ತಷ್ಟು ಮೆರುಗು ನೀಡಲಿದೆ.
ಡಿಸೆಂಬರ್.31ರ ಸಂಜೆ 7 ಗಂಟೆಗೆ ಸಂಗೀತ, ಡಿಜೆ, ಸೆಲ್ಪಿ ಬೂತ್, ವೆಜ್ ಅಂಡ್ ನಾನ್ ವೆಜ್ ಪುಡ್, ಆಟಗಳ ಜೊತೆಗೆ ಹೊಸ ವರ್ಷ ಬರ ಮಾಡಿಕೊಳ್ಳೋರಿಗೆ ಸಖತ್ ಮುದಗೊಳಿಸು ಸದ್ಗುರು ಗ್ರೂಪ್ ಸಿದ್ಧಗೊಂಡಿದೆ.
ಮಲೆನಾಡಿನಲ್ಲಿ ಏಲ್ಲಿ ಆಚರಣೆ ಗೊತ್ತಾ?
ಶಿವಮೊಗ್ಗ ಜಿಲ್ಲೆಯ ಸಾಗರದ ತ್ಯಾಗರ್ತಿ ಕ್ರಾಸ್ ಬಳಿಯ ಎಂ.ಜಿ.ಎಸ್ ಪೈ ಗ್ರೌಂಡ್ ನಲ್ಲಿ ಬಹುದೊಡ್ಡ ಮ್ಯೂಸಿಕ್ ನೈಟ್ ಅನ್ನು ಆಯೋಜಿಸಲಾಗಿದೆ. ಮಲ್ನಾಡ ಕಾರ್ನಿವಲ್ ಎನ್ನುವಂತ ಮ್ಯೂಸಿಕಲ್ ನೈಟ್ ಇದಾಗಿದ್ದು, ಮಲೆನಾಡಿನ ಸೆರಗಲ್ಲಿ ಹೊಸ ವರ್ಷ ಬರ ಮಾಡಿಕೊಳ್ಳೋದಕ್ಕೆ ನೀವು ಸಿದ್ಧರಿದ್ದರೇ ಇಂದೇ ತಡ ಮಾಡದೋ ನೋಂದಾಯಿಸಿಕೊಳ್ಳೋದು ಮರೆಯಬೇಡಿ.
ವೆಜ್ ಅಂಡ್ ನಾನ್ ವೆಜ್ ಪುಡ್
ಮಲ್ನಾಡ್ ಕಾರ್ನಿವಲ್ ನಲ್ಲಿ ಭಾಗಿಯಾಗುವಂತ ನೋಂದಾಯಿತರಿಗೆ ಮಲೆನಾಡಿನ ವಿಶೇಷ ಭಕ್ಷ್ಯಗಳ ವೆಜ್ ಅಂಡ್ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ಸವಿಯೊಂದಿಗೆ ಸಂಗೀತ ರಾತ್ರಿಯಲ್ಲಿ ನೂತನ ವರ್ಷವನ್ನು ನೀವು ಸ್ವಾಗತಿಸಬಹುದಾಗಿದೆ.
ನಿಮ್ಮನ್ನು ಸೆಳೆಯಲಿದೆ ಪ್ರಸಿದ್ಧ ಸಿಂಗರ್ ಗಳಿಂದ ಮ್ಯೂಸಿಕ್ ನೈಟ್
ಇನ್ನೂ ಡಿ.31ರ ರಾತ್ರಿ 7ರಿಂದ ಆರಂಭಗೊಳ್ಳುವ ಅದ್ಧೂರಿ ಮಲ್ನಾಡ್ ಕಾರ್ನಿವಲ್ ನಲ್ಲಿ ಸಂಗೀತ, ಡಿಜೆಯಲ್ಲಿ ಕುಣಿದು ಕುಪ್ಪಳಿಸಬಹುದಾಗಿದೆ. ಈ ಸಂಗೀತ ಸಂಜೆಯಲ್ಲಿ ಪ್ರಸಿದ್ಧ ಸಿಂಗರ್ ಗಳು ನಿಮ್ಮ ಕಿವಿಗಳಿಗೆ ಸಂಗೀತ ಸುಧೆಯ ರಸದೌತಣವನ್ನು ಉಣಬಡಿಸಲಿದ್ದಾರೆ.
ಟಿಕೆಟ್ ಖರೀದಿಸಲು ಈಗಲೇ ಕರೆ ಮಾಡಿ
ಸದ್ಗುರು ಗ್ರೂಪ್ ವತಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ತ್ಯಾಗರ್ತಿ ಕ್ರಾಸ್ ಬಳಿಯ ಎಂಜಿಎನ್ ಪೈ ಗ್ರೌಂಡ್ ನಲ್ಲಿ ಆಯೋಜಿಸುತ್ತಿರುವಂತ ಮಲ್ನಾಡ್ ಕಾರ್ನಿವಲ್ ನಲ್ಲಿ ಭಾಗಿಯಾಗಲು ಟಿಕೆಟ್ ಕಾಯ್ದಿರಿಸುವುದು ಕಡ್ಡಾಯ. ಟಿಕೆಟ್ ಗಾಗಿ ಸಂಪರ್ಕಿಸಿ 9844056743, 9449486666, 9880808810 ಕರೆ ಮಾಡಿ ಬುಕ್ ಮಾಡೋದು ಮರೆಯಬೇಡಿ.
ಹೀಗಿದೆ ಟಿಕೆಟ್ ದರ
ದಿನಾಂಕ 31-12-2024ರ ಸಂಜೆ 7 ಗಂಟೆಗೆ ಆರಂಭಗೊಲ್ಳುವಂತ ಮಲ್ನಾಡ್ ಕಾರ್ನಿವಲ್ ನಲ್ಲಿ ಭಾಗಿಯಾಗಿ, ಸಂಭ್ರಮಿಸಲು 0-9 ವರ್ಷದೊಳಗಿನವರಿಗೆ ಪ್ರವೇಶ ಉಚಿತವಾಗಿದೆ. ಇನ್ನೂ 10 ರಿಂದ 18 ವರ್ಷದೊಳಗಿನವರಿಗೆ ರೂ.499, 19 ವರ್ಷ ಮೇಲ್ಪಟ್ಟವರಿಗೆ ರೂ.699 ಟಿಕೆಟ್ ದರವನ್ನು ನಿಗದಿ ಪಡಿಸಲಾಗಿದೆ.
ಆನ್ ಲೈನ್ ನಲ್ಲೂ ಬುಕ್ ಮಾಡಬಹುದು
ಸಾಗರದ ಸಹೃದಯಿ ಯುವಕ ತಂಡದಿಂದ ಹೊಸ ವರ್ಷಾಚರಣೆಯ ಇವೆಂಟ್ ಆಯೋಜಿಸಲಾಗಿದೆ. ಡಿ.31ರ ಸಂಜೆ 7ರ ಕಾರ್ಯಕ್ರಮದಲ್ಲಿ ಮಲೆನಾಡಿನಲ್ಲೇ ಹೊಸ ವರ್ಷಾಚರಣೆ ಆಚರಿಸಲು ಇಚ್ಚಿಸುವವರು https://hotelsadguruandtours.com/malnad_carnival/booking/ ಲಿಂಕ್ ಕ್ಲಿಕ್ ಮಾಡಿ, ಆನ್ ಲೈನ್ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂಬುದಾಗಿ ಆಯೋಜಕರಾದಂತ ಸಂತೋಷ್ ಸದ್ಗುರು ತಿಳಿಸಿದ್ದಾರೆ.
ವಸಂತ ಬಿ ಈಶ್ವರಗೆರೆ, ಸಂಪಾದಕರು