ಬೆಂಗಳೂರು: ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಸಂತ್ರಗಾಚಿ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 06541 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಸಂತ್ರಗಾಚಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 11 ಮತ್ತು 15 ರಂದು ಮಧ್ಯಾಹ್ನ 03:50 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮಾರ್ಚ್ 13 ಮತ್ತು 17 ರಂದು ಬೆಳಗ್ಗೆ 6:00 ಗಂಟೆಗೆ ಸಂತ್ರಗಾಚಿ ತಲುಪಲಿದೆ.
ಹಿಂದಿರುಗುವ ಪ್ರಯಾಣದಲ್ಲಿ, ರೈಲು ಸಂಖ್ಯೆ 06542 ಮಾರ್ಚ್ 13 ಮತ್ತು 17 ರಂದು ಸಂತ್ರಗಾಚಿಯಿಂದ ಮಧ್ಯಾಹ್ನ 12:10ಕ್ಕೆ ಹೊರಟು, ಮಾರ್ಚ್ 14 ಮತ್ತು 18 ರಂದು ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ರಾತ್ರಿ 08:10 ಗಂಟೆಗೆ ಆಗಮಿಸಲಿದೆ.
ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಕುಪ್ಪಂ, ಜೋಲಾರ್ ಪೆಟ್ಟೈ ಜಂಕ್ಷನ್, ಕಟ್ಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ಸಮಲ್ಕೋಟ್ ಜಂಕ್ಷನ್, ದುವ್ವಾಡ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಬಾಲುಗಾಂವ್, ಖುರ್ದಾ ರೋಡ್, ಭುವನೇಶ್ವರ, ಕಟಕ್, ಜಜ್ಪುರ್ ಕಿಯೋಂಜಾರ್ ರೋಡ್, ಭದ್ರಕ್, ಬಾಲೇಶ್ವರ ಮತ್ತು ಖರಗ್ಪುರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತವೆ.
ಈ ರೈಲಿನಲ್ಲಿ 19 ಎಸಿ ತ್ರಿ ಟೈಯರ್, ಮತ್ತು 2 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ ಸೇರಿದಂತೆ 21 ಬೋಗಿಗಳು ಇರಲಿವೆ.
ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ, ಇತರ ವಿವರಗಳನ್ನು ಪರಿಶೀಲಿಸಬಹುದು.
ಇನ್ನೆರಡು ತಿಂಗಳಲ್ಲಿ ‘ಕಾರವಾರ ಆಸ್ಪತ್ರೆ’ ಲೋಕಾರ್ಪಣೆ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್