ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿ ಇಂದಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಾವಳಿ ನೋಡಲು ತೆರಳೋರಿಗೆ ನಮ್ಮ ಮೆಟ್ರೋ, ಬಿಎಂಟಿಸಿ ಬಸ್ ಸಂಚಾರ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಟಾಟಾ ಮಹಿಳಾ ಪ್ರೀಮಿಯರ್ ಲೀಗ್ (WPL) T-20 ಕ್ರಿಕೆಟ್ ಪಂದ್ಯಗಳು ಬೆಂಗಳೂರಿನಲ್ಲಿ ಫೆಬ್ರವರಿ 21, 22, 24, 25, 26, 27, 28 ಮತ್ತು ಮಾರ್ಚ್ 01, 2025 ರಂದು ನಡೆಯಲಿವೆ. ಕ್ರಿಕೆಟ್ ಪಂದ್ಯಗಳಿಗೆ ಪ್ರಯಾಣಿಸಲು ಮತ್ತು ಹಿಂತಿರುಗಲು ಅನುಕೂಲವಾಗುವಂತೆ, ಬಿ.ಎಂ.ಆರ್.ಸಿ.ಎಲ್ ಈ ಮೇಲೆ ತಿಳಿಸಿದ ದಿನಗಳಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಿದೆ ಎಂದಿದೆ.
ನೇರಳೆ ಮತ್ತು ಹಸಿರು ಮಾರ್ಗಗಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಾದ ಚಲ್ಲಘಟ್ಟ, ವೈಟ್‌ಫೀಲ್ಡ್, ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು ಸೇವೆ ರಾತ್ರಿ 11.20 ರವರೆಗೆ ಮತ್ತು ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 11:55 ಕ್ಕೆ ಹೊರಡುತ್ತವೆ ಎಂಬುದಾಗಿ ತಿಳಿಸಿದೆ.
ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳು (ಎನ್‌ಸಿಎಂಸಿ) ಮತ್ತು ಟೋಕನ್‌ಗಳನ್ನು ಬಳಸಿ ಪ್ರಯಾಣಿಸಬಹುದು ಎಂಬುದಾಗಿ ಹೇಳಿದೆ.
ಬಿಎಂಟಿಸಿ ಬಸ್ ಸಂಚಾರ ವಿಸ್ತರಣೆ
ದಿನಾಂಕ 21.02.2025, 22.02.2025, 24.02.2025, 25.02.2025, 26.02.2025, 27.02.2025, 28.02.2025 ಹಾಗೂ 01.03.2025 ಗಳಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ TATA Women’s Premier League 2025-WPL T20 ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು, ಸದರಿ ಕ್ರಿಕೆಟ್ ಪಂದ್ಯಾವಳಿಗೆ ಬಂದು-ಹೋಗುವ ವೀಕ್ಷಕರಿಗೆ ಬೇಡಿಕೆಗನುಗುಣವಾಗಿ ಬೆಂ.ಮ.ಸಾ.ಸಂಸ್ಥೆಯಿಂದ ವ್ಯವಸ್ಥಿತ ಸಾರಿಗೆಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರದ ವಿವಿಧ ಭಾಗಗಳಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ನಡುವೆ ಕಾರ್ಯಾಚರಿಸಲಾಗುವ ಸಾರಿಗೆಗಳ ಮಾರ್ಗದ ವಿವರ ಕೆಳಕಂಡಂತಿದೆ :
1. ಎಸ್.ಬಿ. ಎಸ್-1ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಕಾಡುಗೋಡಿ ಬಸ್ ನಿಲ್ದಾಣ (ಹೆಚ್.ಎ.ಎಲ್‌ರಸ್ತೆ)
2. ಜಿ-2 ಸರ್ಜಾಪುರ
3. ಜಿ-3 ಎಲೆಕ್ಟ್ರಾನಿಕ್ ಸಿಟಿ (ಹೊಸೂರುರಸ್ತೆ)
4. ಜಿ-4 ಬನ್ನೇರುಘಟ್ಟಮೃಗಾಲಯ
5. ಜಿ-7 ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ)
6. ಜಿ-10 ಆರ್.ಕೆ. ಹೆಗಡೆ ನಗರ ಯಲಹಂಕ (ನಾಗವಾರ, ಟ್ಯಾನರಿ ರಸ್ತೆ)
7, 317 ಜಿ ಹೊಸಕೋಟೆ
8. 13 ಬನಶಂಕರಿ