ಶಿವಮೊಗ್ಗ: ಸಾಗರ ತಾಲ್ಲೂಕಿನಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಮಳೆಯಿಂದಾಗಿ ಅಲ್ಲಲ್ಲಿ ಮನೆಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಮನೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್ ಎನ್ನುವಂತೆ ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪರಿಹಾರದ ಚೆಕ್ ವಿತರಣೆ ಮಾಡಲಿದ್ದಾರೆ.
ಈ ಬಗ್ಗೆ ಶಾಸಕರ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಸಾಗರ ನಗರಸಭೆ ವತಿಯಿಂದ ಮಳೆಯಿಂದ ಮನೆಹಾನಿಯಾದ ಸಂತ್ರಸ್ತರಿಗೆ ಪರಿಹಾರದ ಚೆಕ್ ಅನ್ನು ಗೋಪಾಲಕೃಷ್ಣ ಬೇಳೂರು ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದೆ.
ಸಾಗರದ ಗೋಪಾಲಕಗೌಡ ನಗರದಲ್ಲಿ ಭಾರೀ ಮಳೆಯಿಂದಾಗಿ ಮನೆಯ ಶೆಡ್ ಮೇಲೆ ಲೈಟ್ ಕಂಬ ಬಿದ್ದು ಹಾನಿಯುಂಟಾಗಿದ್ದವರಿಗೆ, ಮನೆಯ ಮೇಲ್ಚಾವಣಿ ಹಾನಿಯಾದವರು ಸೇರಿದಂತೆ ವಿವಿಧ ಮೂವರು ಮನೆಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತಿದೆ.
ಇನ್ನೂ ಸಾಗರದ ಶ್ರೀಧರ ನಗರ, ಶಾಂತಿನಗರ, ಮಾರಿಕಾಂಬ ರಸ್ತೆ, ಸಂಗಮೇಶ್ವರ ರಸ್ತೆ, ಜನ್ನತ್ ನಗರ, ಎಕೆ ಕಾಲೋನಿಯ ಎಸ್ ಎನ್ ನಗರ, ಅಗ್ರಹಾರ, ಜಂಬಗಾರು, ಗಾಂಧಿನಗರ ಸೇರಿದಂತೆ ಒಟ್ಟು 27 ಮನೆಹಾನಿ ಸಂತ್ರಸ್ತರಿಗೆ ಪರಿಹಾರವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವಿತರಣೆ ಮಾಡಲಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಈ ಬಾರಿ ‘ಮೈಸೂರು ದಸರಾ’ದಲ್ಲಿ ಅಂಬಾರಿಯನ್ನು ‘ಅಭಿಮನ್ಯು’ ಹೋರಲಿದೆ: ಸಚಿವ ಈಶ್ವರ್ ಖಂಡ್ರೆ
BREAKING: 7 ಮಸೂದೆಗಳನ್ನು ಕರ್ನಾಟಕ ವಿಧಾನಮಂಡಲದಲ್ಲಿ ಮಂಡಿಸಲು ತೀರ್ಮಾನ: ಸಿಎಂ ಸಿದ್ಧರಾಮಯ್ಯ