ಆತ್ಮ ನಿರ್ಭರ ಭಾರತ ಅಭಿಯಾನ, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆ, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಸುವರ್ಣಾವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಶೇ. 50 ರಷ್ಟು ಅಥವಾ ಗರಿಷ್ಟ ರೂ. 15 ಲಕ್ಷ ಸಹಾಯಧನ (ಕೇಂದ್ರ ಸರ್ಕಾರದ ರೂ. 6 ಲಕ್ಷ ಹಾಗೂ ರಾಜ್ಯ ಸರ್ಕಾರದ ರೂ. 9 ಲಕ್ಷ ಸಹಾಯಧನ) ನೀಡಲಾಗುತ್ತದೆ.
ಯೋಜನೆಯ ಘಟಕಗಳ ಕಿರು ಪರಿಚಯ:
ವೈಯಕ್ತಿಕ ಉದ್ದಿಮೆಗಳು ಮತ್ತು ಗುಂಪುಗಳು: ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಮತ್ತು ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರು ಹಾಗೂ ಯಾವುದೇ ಕನಿಷ್ಠ ವಿದ್ಯಾರ್ಹತೆ ಇರುವುದಿಲ್ಲ.
ಇತರೆ ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಅರ್ಹರಾಗಿರುತ್ತಾರೆ. ವೈಯಕ್ತಿಕ ಉದ್ದಿಮೆಗಳಿಗೆ ಮಾಲೀಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ, ರೈತ ಉತ್ಪಾದಕರ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಸ್ವ-ಸಹಾಯ ಸಂಘಗಳಿಗೆ ಸಾಲ ಸಂಪರ್ಕಿತ ಶೇ. 35 ರಷ್ಟು ಸಹಾಯಧನ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ. 15 ಸಹಾಯಧನ, ಗರಿಷ್ಟ ರೂ. 15 ಲಕ್ಷಗಳು ಅಥವಾ ಶೇ. 50 ರಷ್ಟು ಸಹಾಯಧನ ಪಡೆಯಲು ಅವಕಾಶ ಇರುತ್ತದೆ.
ಪ್ರಾಥಮಿಕ ಬಂಡವಾಳ (Seed Capital): ಆಹಾರ ಸಂಸ್ಕರಣಾ ಚಟುವಟಿಕೆಗಳಲ್ಲಿ ತೊಡಗಿರುವ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತಿ ಸದಸ್ಯರಿಗೆ ಗರಿಷ್ಟ ರೂ. 40,000 ಗೆ ಕಡಿಮೆ ಬಡ್ಡಿ ದರದ ಸಾಲ ನೀಡಲಾಗುವುದು. ಪ್ರತಿ ಸ್ವ-ಸಹಾಯ ಸಂಘಕ್ಕೆ ಗರಿಷ್ಟ ರೂ. 4 ಲಕ್ಷ ಪಡೆಯಲು ಅವಕಾಶವಿದೆ.
ಸಾಮಾನ್ಯ ಮೂಲ ಸೌಕರ್ಯ ಸ್ಥಾಪನೆ: ಸಾಮಾನ್ಯ ಮೂಲಭೂತ ಸೌಕರ್ಯ ಸೃಷ್ಟಿಗೆ ಶೇ. 35 ರಷ್ಟು ಸಾಲ ಸಂಪರ್ಕಿತ ಸಹಾಯ ಧನ, ಗರಿಷ್ಟ ಸಹಾಯಧನ ರೂ. 3 ಕೋಟಿ ನೀಡಲಾಗುವುದು.
ರೈತ ಉತ್ಪಾದಕರ ಸಂಸ್ಥೆಗಳು ಅಥವಾ ಕಂಪನಿಗಳು, ಸಹಕಾರಿಗಳು, ಸ್ವ- ಸಹಾಯ ಸಂಘಗಳು ಮತ್ತು ಅದರ ಒಕ್ಕೂಟಗಳು ಮತ್ತು ಸರ್ಕಾರಿ ಸಂಸ್ಥೆಗಳು ಅರ್ಹ ಸಂಸ್ಥೆಗಳಾಗಿವೆ. ಅರ್ಜಿದಾರರ ಸಂಸ್ಥೆಯ ಕನಿಷ್ಟ ವಹಿವಾಟು ಮತ್ತು ಅನುಭವದ ಯಾವುದೇ ಪೂರ್ವ ಷರತ್ತುಗಳಿರುವುದಿಲ್ಲ.
ವಿಂಗಡಣೆ, ಶ್ರೇಣೀಕರಣ, ಸಂಗ್ರಹಣೆ, ಸಾಮಾನ್ಯ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಪ್ರಯೋಗಾಲಯ ಇತ್ಯಾದಿ ಘಟಕಗಳನ್ನು ಸ್ಥಾಪಿಸಲು ಅವಕಾಶವಿದೆ.
ಬ್ರಾಂಡಿಂಗ್ ಮತ್ತು ಮಾರುಕಟ್ಟೆಗೆ ಸಹಾಯ: ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹೀರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಇತ್ಯಾದಿಗಳಿಗಾಗಿ ಶೇ. 50 ರಷ್ಟು ಸಹಾಯಧನ ನೀಡಲಾಗುವುದು.
ರೈತ ಉತ್ಪಾದಕರ ಸಂಸ್ಥೆಗಳು ಅಥವಾ ಕಂಪನಿಗಳು, ಸಹಕಾರಿಗಳು, ಸ್ವ-ಸಹಾಯ ಸಂಘಗಳು, ಸಹಕಾರಿ ಸಂಸ್ಥೆಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ವಿಶೇಷ ಉದ್ದೇಶ ಸಂಸ್ಥೆ (SPV) ಗಳು ಅರ್ಹ ಸಂಸ್ಥೆಗಳಾಗಿವೆ.
ಯೋಜನೆಯ ವೈಶಿಷ್ಟ್ಯತೆಗಳು: ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮತ್ತು ತ್ವರಿತಗತಿಯಲ್ಲಿ ಅರ್ಜಿ ವಿಲೇವಾರಿ ಮಾಡಲಾಗುವುದು. ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಯೋಜನಾ ಪ್ರಸ್ತಾವನೆ ಸಿದ್ಧತೆ ಮತ್ತು ಅರ್ಜಿ ಸಲ್ಲಿಕೆಗೆ ಸಹಾಯ ಮಾಡಲಾಗುವುದು. ಆಹಾರ ಸಂಸ್ಕರಣಾ ತಾಂತ್ರಿಕತೆಗಳ ಬಗ್ಗೆ ಉಚಿತವಾಗಿ ತರಬೇತಿ – CFTRI, IIHR ಮುಂತಾದ ಸಂಸ್ಥೆಗಳಿಂದ ನೀಡಲಾಗುವುದು. ಅಉಖಿಒSಇ ಸಂಸ್ಥೆಯಿಂದ ಯೋಜನೆಯಡಿ ಒದಗಿಸುವ ಸಾಲಕ್ಕೆ ಕ್ರೆಡಿಟ್ ಗ್ಯಾರಂಟಿ ಒದಗಿಸಲಾಗುವುದು.
ಯೋಜನೆಯಡಿ ಸ್ಥಾಪಿಸಬಹುದಾದ ಆಹಾರ ಸಂಸ್ಕರಣಾ ಉದ್ದಿಮೆಗಳು: ಸಿರಿಧಾನ್ಯಗಳ ಮತ್ತು ಇತರೆ ಧಾನ್ಯಗಳ ಸಂಸ್ಕರಣೆ, ಬೆಲ್ಲ ಮತ್ತು ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೆಸ್ಟ್ ಆಯಿಲ್, ಮೆಣಸಿನ ಪುಡಿ ಘಟಕಗಳು, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಸಂಸ್ಕರಣಾ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕುಕ್ಕುಟ ಉತ್ಪನ್ನಗಳು, ಸಾಗರ ಉತ್ಪನ್ನಗಳು, ವಿವಿಧ ಹಣ್ಣು ಮತ್ತು ತರಕಾರಿಗಳ ಉತ್ಪನ್ನಗಳು ಇತ್ಯಾದಿ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಸಲ್ಲಿಕೆಗಾಗಿ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಅಥವಾ ಕೆಪೆಕ್ ಸಂಸ್ಥೆಯ ಯೋಜನಾ ನಿರ್ವಹಣಾ ಘಟಕವನ್ನು ಅಥವಾ ದೂರವಾಣಿ ಸಂಖ್ಯೆ: 9964398062, 9741008486, 8867617858, 9731201215 ಗೆ ಅಥವಾ https://pmfme.mofpi.gov.in/ ಅಥವಾ https://kappec.karnataka.gov.in/ ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.